Sunday, January 19, 2025

ನಾಡಕಚೇರಿಯಲ್ಲಿ ಲಂಚಾವತಾರ: ಕ್ಯಾಮರಾ ಕಣ್ಣಲ್ಲಿ ಸೆರೆ!

ರಾಯಚೂರು : ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ ಶಶಿಕಲಾ ಲಂಚಾವತರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ರಾಯಚೂರು ತಾಲ್ಲೂಕು ಕಚೇರಿಯಲ್ಲಿ ಕಡತಗಳಿಗೆ ಸಹಿ ಹಾಕಲು ಹಣ ಪಡೆಯುತ್ತಿದ್ದಾರ ಶಿರಸ್ಥೇದಾರ್​ ಶಶಿಕಲಾ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ. ಯಾವುದೇ ಕೆಲಸವಾಗಬೇಕೆಂದರೂ ಪ್ರತಿಯೊಂದು ಫೈಲ್​​ ಸಹಿಗೆ 2-3 ಸಾವಿರ ರೂಪಾಯಿ ಕೇಳುವ ಶಶಿಕಲಾ, ಸಿಂಧುತ್ವ ಫೈಲ್​ಗೆ ಸಹಿ ಆಗಬೇಕು ಅಂದರೇ ಹಣವನ್ನ ಕೊಡಲೇಬೇಕಾಗಿತ್ತು.

ಇದನ್ನೂ ಓದಿ: ರಾಜ್ಯದ ಎಲ್ಲಾ ಸಂಸದರು ನರಸತ್ತವರು: ಕರವೇ ನಾರಾಯಣಗೌಡ!

ಇದೀಗ ತಮ್ಮ ಕಚೇರಿಯಲ್ಲಿ ಲಂಚ ಪಡೆಯುವಾಗ ಶಶಿಕಲಾ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಶಶಿಕಲಾ ಪ್ರತಿದಿನ 20-30 ಸಿಂಧುತ್ವ ಫೈಲ್​​ಗಳಿಗೆ ಸಹಿ ಹಾಕುತ್ತಿದ್ದರು. ಲಂಚ ಬಾಕುತನದಿಂದ ಬೇಸತ್ತಿರುವ ಜನತೆ ಭ್ರಷ್ಟ ಅಧಿಕಾರಿಯನ್ನು ಕೂಡಲೇ ಸಸ್ಪೆಂಡ್ ಮಾಡುವಂತೆ ಒತ್ತಾಯಿಸಿದ್ದಾರೆ.

RELATED ARTICLES

Related Articles

TRENDING ARTICLES