Monday, February 24, 2025

ಬರಗಾಲ ಯಾರಾದ್ರೂ ಹೇಳಿ ಕೇಳಿ ಕರೆಯೋಕೆ ಸಾಧ್ಯನಾ? : ಚಲುವರಾಯಸ್ವಾಮಿ

ಬೆಂಗಳೂರು : ಬಿಜೆಪಿಯವರಿಗೆ ಭಯ ಬಂದಿದೆ. ಲೋಕಸಭಾ ಚುನಾವಣೆ ಎದುರಿಸಲು ಆಗ್ತಿಲ್ಲ. ಅದಕ್ಕೆ ಸಿದ್ದರಾಮಯ್ಯ ಬಗ್ಗೆ ಮಾತನಾಡ್ತಿದ್ದಾರೆ. ಬರಗಾಲ ಯಾರಾದ್ರೂ ಹೇಳಿ ಕೇಳಿ ಕರೆಯಲು ಸಾಧ್ಯವಾ? ಸಂಸ್ಕಾರವಿಲ್ಲದೆ ಮಾತನಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕಿಡಿಕಾರಿದರು.

ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದಾಗ ವಿಶ್ ಮಾಡದೆ ಹೋಗಿದ್ದಾರೆ. ಸಿದ್ದರಾಮಯ್ಯ ಬಗ್ಗೆ ಮಾತನಾಡಿದ್ರೆ ನಮ್ಮನ್ನು ದೆಹಲಿಗೆ ಕರೀತಾರೆ ಅಂತ ತಿಳಿದಿದ್ದಾರೆ ಎಂದು ಕುಟುಕಿದರು.

ನಾಲ್ಕು ತಿಂಗಳಾದರೂ ಇವ್ರು ವಿಪಕ್ಷ ನಾಯಕನ ಆಯ್ಕೆ ಮಾಡಿಲ್ಲ. ಈಗ ಜೆಡಿಎಸ್‌ ಜೊತೆ ಹೋಗ್ತಿದ್ದಾರೆ. ಬಜೆಪಿ ಅಸ್ಥಿತ್ವ ಕಳೆದುಕೊಂಡಿದೆ. ಪಕ್ಕದಲ್ಲಿದ್ದವರು ಎಚ್ಚರಿಸಿದ ಬಳಿಕ ಬಿಜೆಪಿ ಹಾಗೂ ಜೆಡಿಎಸ್‌ ಅಸ್ತಿತ್ವ ಕಳೆದುಕೊಂಡಿದೆ. ಸಿದ್ದರಾಮಯ್ಯ ಗ್ಯಾರಂಟಿ ಅಲೋಕೇಷನ್ ಕೊಡ್ತಿದ್ದಾರೆ. ಅದರ ಜೊತೆ ಬೇರೆ ಕೆಲಸಗಳೂ ನಡೆಯುತ್ತಿದೆ ಎಂದು ಚಾಟಿ ಬೀಸಿದರು.

ರೈತರಿಗೆ ಐದು ಲಕ್ಷ ಬಡ್ಡಿ ರಹಿತ ಸಾಲ

196 ತಾಲೂಕು ಬರ ಅಂತ ಘೋಷಣೆ ಮಾಡಲಾಗಿದೆ. 34 ತಾಲ್ಲೂಕು ಗೈಡ್ ಲೈನ್ಸ್ ಬರ್ತಿಲ್ಲ. ಅದನ್ನೂ ಗೈಡ್ ಲೈನ್ಸ್ ಒಳಗೆ ತಂದು ಬರ ಅಂತ ಘೋಷಣೆ ಮಾಡುವ ಪ್ರಯತ್ನ ಮಾಡ್ತಿದ್ದೇವೆ. ಪಾರ್ಲಿಮೆಂಟರಿ ಬೋರ್ಡ್‌ಗೆ ತಂದು ನಿರ್ಧಾರ ಮಾಡ್ತೀವಿ. ರೈತರಿಗೆ ಐದು ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲ ಕೊಡ್ತಿದ್ದೇವೆ. ಹಾಲು ದರ ಏರಿಸಿ ರೈತರಿಗೆ ಕೊಡಲಾಗ್ತಿದೆ. ಇದನ್ನೆಲ್ಲ ಸಿದ್ದರಾಮಯ್ಯ ತಾನೆ ಮಾಡಿದ್ದು ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು.

RELATED ARTICLES

Related Articles

TRENDING ARTICLES