Thursday, January 23, 2025

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ದೌರ್ಜನ್ಯ

ಹಾವೇರಿ : ಕ್ಷುಲಕ ಕಾರಣಕ್ಕೆ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ದೌರ್ಜನ್ಯ ಎಸಗಿರುವ ಘಟನೆ ಶಿಗ್ಗಾವಿ ತಾಲೂಕಿನ ಮೂಕಬಸರಿಕಟ್ಟಿ ಗ್ರಾಮದಲ್ಲಿ ನಡೆದಿದೆ.

ರಾಮಪ್ಪ ದುರಗಪ್ಪ ಹರಿಜನ ದೌರ್ಜನ್ಯಕ್ಕೋಳಗಾದ ವ್ಯಕ್ತಿ. ಎಂಬುವನು ಡಿಶ್ ಟಿ.ವಿ ವೈರ್ ಕಟ್ಟಾಗಿದ್ದ ವಿಚಾರಕ್ಕೆ ಗಲಾಟೆ ನಡೆದಿದ್ದು, ಆ ವ್ಯಕ್ತಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಚನ್ನಾಗಿ ಹೊಡೆದಿದ್ದಾರೆ.

ಇದನ್ನು ಓದಿ : ನೀವೆನು ಲಾರ್ಡಾ, ಜನ ಬಂದು ನಿಮ್ಮ ಮನೆ ಬಾಗಿಲು ಕಾಯಬೇಕಾ?; ಸಚಿವ ಕೃಷ್ಣಭೈರೇಗೌಡ ಕ್ಲಾಸ್

ಈ ಘಟನೆಯಿಂದ ರಾಮಪ್ಪ ಅವರಿಗೆ ಗಾಯವಾಗಿದ್ದು, ಗಾಯಾಳು ವ್ಯಕ್ತಿಯನ್ನು ಬಂಕಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಹೊಡೆದಿರುವ ವಿಡಿಯೋ ವೈರಲ್ ಆಗಿದ್ದು, ಬಂಕಾಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

RELATED ARTICLES

Related Articles

TRENDING ARTICLES