Thursday, January 23, 2025

ಸಕ್ಕರೆನಾಡಲ್ಲಿ ದರೋಡೆ ಮಾಡುತ್ತಿದ್ದ ಹೈಟೆಕ್ ಕಳ್ಳರ ಬಂಧನ..!

ಮಂಡ್ಯ : ಸಕ್ಕರೆ ನಾಡಲ್ಲಿ ದರೋಡೆ ಮಾಡುತ್ತಿದ್ದ ಹೈಟೆಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಕೆ.ಆರ್.ಪೇಟೆ ಟೌನ್ ಪೋಲಿಸರು.

ಆಗಸ್ಟ್ 17 ರಂದು ನಾಗಮಂಗಲ ತಾಲೂಕಿನ ಚಾಕೇನಹಳ್ಳಿಯ ರವಿಕುಮಾರ್ (42), ಮಂಡ್ಯದ ಸೂನಗಹಳ್ಳಿಯ ಮಂಜುನಾಥ್ (36), ವಿಷ್ಣು (31) ಹಾಗೂ ಹೇಮಂತ್ ಕುಮಾರ್ (30) ಬಂಧಿತ ಆರೋಪಿಗಳು. ಈ ನಾಲ್ವರು ಆಗಸ್ಟ್ 17 ರಂದು ಕೆ.ಆರ್.ಪೇಟೆ ಪಟ್ಟಣದ ಜ್ಯುವೆಲರಿ ಶಾಪ್​ನಲ್ಲಿ ಕಳ್ಳತನವನ್ನು ಮಾಡಿದ್ದರು. ಅಷ್ಟೇ ಅಲ್ಲ ಜ್ಯುವೆಲರಿ ಶಾಪ್, ವಾಹನಗಳ ಕಳ್ಳತನ,ಹಸುಗಳನ್ನು ಈ ನಾಲ್ವರು ಭಾಗಿಯಾಗಿ ಕಳ್ಳತನ ಮಾಡಿದ್ದರು.

ಇದನ್ನು ಓದಿ : ನನ್ನ ಮಗಳನ್ನ ಬಳಸಿಕೊಂಡು ಅವಳನ್ನ ಈ ಸ್ಥಿತಿಗೆ ತಂದಿದ್ದಾರೆ : ಚೈತ್ರಾ ಕುಂದಾಪುರ ತಾಯಿ ರೋಹಿಣಿ

ಆರೋಪಿ ರವಿಕುಮಾರ್ ಚಾಕೇನಹಳ್ಳಿಯ ಗ್ರಾಮ ಪಂಚಾಯಿತಿಯಲ್ಲಿ ಸ್ಪರ್ಧಿಸಿ ಸೋತಿದ್ದರು. ಈ ಕಳ್ಳತನದಲ್ಲಿ ಪ್ರಮುಖ ಆರೋಪಿ ರವಿಕುಮಾರ್​ಗೆ ಸಹಾಯ ಮಾಡ್ತಿದ್ದಾ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ್. ಈ ಹಿನ್ನೆಲೆ ಕೆ.ಆರ್. ಪೇಟೆ ಠಾಣಾ ವ್ಯಾಪ್ತಿಯಲ್ಲಿ 4, ಮಂಡ್ಯ ಠಾಣಾ ವ್ಯಾಪ್ತಿಯಲ್ಲಿ 2, ಚನ್ನಪಟ್ಟಣ, ಮೈಸೂರಿನ ಉದಯಗಿರಿ, ಬನ್ನೂರು, ಚನ್ನಪಟ್ಟಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ತಲ ಒಂದೊಂದು ಪ್ರಕರಣ ಸೇರೊ 11 ಪ್ರಕರಣಗಳು ದಾಖಲಾಗಿದ್ದವು.

ಆದರೆ ಈ ನಾಲ್ವರನ್ನು ಮಾತ್ರ ಬಂಧಿಸಲು ಆಗಿರಲಿಲ್ಲ. ಈ ಹಿನ್ನೆಲೆ ಡಿವೈಎಸ್ಪಿ ಲಕ್ಷ್ಮೀ ನಾರಾಯಣ್ ಪ್ರಸಾದ್ ನೇತೃತ್ವದಲ್ಲಿ ಖತರ್ನಾಕ್ ಕಳ್ಳರ ಸೇರೆ ಹಿಡಿಯಲು ವಿಶೇಷ ತಂಡವೊಂದನ್ನು ರಚಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಸೆಪ್ಟೆಂಬರ್ 9 ರಂದು ನಾಗಮಂಗಲದ ಬೆಳ್ಳೂರು ಕ್ರಾಸ್​ನ ಉಮರ್ ನಗರದ ಬಳಿ ಈ ನಾಲ್ವರನ್ನು, ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಸದ್ಯ ಬಂಧಿತ ಆರೋಪಿಗಳಿಂದ 35.86 ಲಕ್ಷ ಮೌಲ್ಯದ ವಸ್ತುಗಳು, 150 ಗ್ರಾಂ ತೂಕದ ಚಿನ್ನ, 20 ಕೆಜಿಯಷ್ಟು ಬೆಳ್ಳಿ ಸಾಮಾನು,1 ಟಾಟಾ ಎಸಿ ವಾಹನ, 1ಎರಿಟಿಕಾ ಕಾರು,1 ಬೈಕ್, ಲ್ಯಾಪ್ ಟ್ಯಾಪ್, 8 ಹಸುಗಳು, 1 ಸಿಲೆಂಡಿರ್, ವಾಟರ್ ಟ್ಯಾಂಕ್, ಗ್ಯಾಸ್ ಕಟರ್ ಹಾಗೂ 40 ಸಾವಿರ ನಗದು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES