Wednesday, January 22, 2025

ರಾಜ್ಯದ ಎಲ್ಲಾ ಸಂಸದರು ನರಸತ್ತವರು: ಕರವೇ ನಾರಾಯಣಗೌಡ!

ಬೆಂಗಳೂರು: ರಾಜ್ಯದ ಎಲ್ಲಾ ಸಂಸದರು ನರಸತ್ತವರು. ಸಂಸದರ ಮನೆಗೆ ಕರವೇ ಕಾರ್ಯಕರ್ತರನ್ನು ನುಗ್ಗಿಸುತ್ತೇವೆ ಎಂದ ಕರವೇ ಅಧ್ಯಕ್ಷ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ತಮಿಳುನಾಡಿಗೆ ಕಾವೇರಿ ನದಿನೀರು ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದ ಎಲ್ಲಾ ಸಂಸದರು ನರಸತ್ತವರು. ಸಂಸದರ ಮನೆಗೆ ಕರವೇ ಕಾರ್ಯಕರ್ತರನ್ನು ನುಗ್ಗಿಸುತ್ತೇವೆ ಎಂದರು. ಕಾವೇರಿ ನದಿ ನೀರು ವಿಚಾರದಲ್ಲಿ ನಾವು ಭುಗಿಲೇಳಬೇಕಿದೆ. ಮತ್ತೆ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂಬ ಆದೇಶವನ್ನು ನಾವು ಧಿಕ್ಕರಿಸುತ್ತೇವೆ ಎಂದರು.

ನಮ್ಮಲ್ಲಿ ನೀರಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಧಿಮಾಕು ಮಾಡುತ್ತಿದ್ದಾರೆ. ದೆಹಲಿಯಲ್ಲಿ ಕುಳಿತು ಧಿಮಾಕು ಮಾಡಿಕೊಂಡು ನೀರು ಕೊಡಿ ಅಂತಾರೆ. ಹೀಗೆ ಹೇಳುತ್ತಿದ್ದರೆ ತಮಿಳುನಾಡಿಗೆ ನೀರು ಕೊಡಲು ಹೇಗೆ ಸಾಧ್ಯ? ರಾಜ್ಯ ಸರ್ಕಾರದ ನಿಲುವನ್ನು ಈವರೆಗೂ ಬೆಂಬಲಿಸಿದ್ದೇವೆ. ಆದರೆ ಇನ್ನು ಬೆಂಬಲಿಸುವುದಿಲ್ಲ.

ಕಾವೇರಿ ‌ನೀರು ನಿಯಂತ್ರಣ ಸಮಿತಿ ಆದೇಶ ಪಾಲಿಸಿದ್ರೆ ಭುಗಿಲೇಳುತ್ತೇವೆ. ಲಾಠಿಚಾರ್ಜ್‌, ಫೈರಿಂಗ್‌ ಮಾಡಿ ಜೈಲಿಗೆ ಹಾಕಿದ್ರೂ ನಾವು ಹೆದರಲ್ಲ. ಕಾವೇರಿ ಕನ್ನಡಿಗರ ಜೀವನದಿ, ರಕ್ಷಣೆಗಾಗಿ ಏನು ಬೇಕಾದ್ರೂ ಮಾಡುತ್ತೇವೆ. ಬೆಂಗಳೂರಿನ ಗೋಲ್ಡ್ ಫಿಂಚ್ ಹೋಟೆಲ್‌ನಲ್ಲಿ ಇಂದು ಸಭೆ ಕರೆದಿದ್ದೇವೆ. ಶುಕ್ರವಾರ ಎಲ್ಲಾ ಡಿಸಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ. ಶನಿವಾರ ಜೈಲು ಭರೋ ಚಳವಳಿ ಮಾಡ್ತೇವೆ, ಎಲ್ಲಾ ಕಡೆ ಮುತ್ತಿಗೆ ಹಾಕುತ್ತೇವೆ. ರಾಜ್ಯ ಸರ್ಕಾರ ಎಷ್ಟು ಜನರನ್ನು ಜೈಲಿಗೆ ಹಾಕುತ್ತದೆಯೋ ಹಾಕಲಿ ಎಂದರು.

RELATED ARTICLES

Related Articles

TRENDING ARTICLES