ವಿಜಯವಾಡ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಸ್ಕಿಲ್ ಹಗರಣದಲ್ಲಿ ಅಕ್ರಮವೆಸಗಿದ ಆರೋಪದಲ್ಲಿ ಅರೆಸ್ಟ್ಮಾಡಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಈ ವಿಚಾರವಾಗಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರಿಗೆ ಕರೆ ಮಾಡಿ ಮಾತನಾಡಿರುವುದನ್ನು ಸಚಿವೆ ರೋಜಾ ಖಂಡಿಸಿದ್ದಾರೆ.
ನಟ ರಜನಿಕಾಂತ್ ಅವರು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತಂದೆಯ ಬಗ್ಗೆ ವಿಚಾರಿಸಿದ್ದಾರೆ. ಇದನ್ನು ಆಂಧ್ರ ರಾಜ್ಯದ ಪರಿಸರ ಸಚಿವೆ ಹಾಗೂ ನಟಿ ರೋಜಾ ಖಂಡಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ: ಕೇಂದ್ರ ಸಚಿವರಿಗೆ ಸಿಎಂ ಪತ್ರ
ನಾಯ್ಡು ಅವರನ್ನು ಬೆಂಬಲಿಸುವುದರಿಂದ ರಜನಿ ಅವರ ಗೌರವ ಕಡಿಮೆಯಾಗುತ್ತದೆ. ಜನ ಅವರನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಭಾವಿಸಿ ರಜನಿ ರಾಜಕೀಯಕ್ಕೆ ಬರಲಿಲ್ಲ ಎಂದು ರೋಜಾ ಆರೋಪಿಸಿದ್ದಾರೆ. ಜನಕಲ್ಯಾಣಕ್ಕಾಗಿ ಜೈಲಿಗೆ ಹೋಗಿ ಬಂದವರನ್ನು ಬೆಂಬಲಿಸಿದರೆ ಸರಿ ಆದರೆ, ರಜನಿಕಾಂತ್ ಕಳ್ಳರನ್ನು ಏಕೆ ಬೆಂಬಲಿಸುತ್ತಾರೆ? ಎಂಬ ಪ್ರಶ್ನಿಸಿದ್ದಾರೆ.
ಚಂದ್ರಬಾಬು ನಾಯ್ಡು ಒಳ್ಳೆಯವರು ಎಂದು ಹೇಳಿದರೆ ಜನ ನಂಬುವುದಿಲ್ಲ. ಹಣ ದೋಚುವವರಿಗೆ ಸಾಂತ್ವನ ಹೇಳುವುದರ ಅರ್ಥವೇನು? ಅವರು ಜನರಿಗೆ ಯಾವ ಸಂದೇಶವನ್ನು ರವಾನಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ರೋಜಾ ರಜನಿಕಾಂತ್ ಅವರನ್ನು ಪ್ರಶ್ನಿಸಿದ್ದಾರೆ.