Tuesday, November 5, 2024

ಮಾನಸಿಕ ಅಸ್ವಸ್ಥ ಯುವತಿಯ ಜೊತೆಗೆ ಪೊಲೀಸರ ಅಸಭ್ಯ ವರ್ತನೆ!

ಮಂಗಳೂರು : ಮಾನಸಿಕ ಅಸ್ವಸ್ಥ ಯುವತಿಯ ಜೊತೆಗೆ ಪೊಲೀಸರು ದುರ್ವರ್ತನೆ ನಡೆಸಿದ ಘಟನೆ ಮಂಗಳೂರಿನ ಕದ್ರಿ ಪೊಲೀಸ್​ ಠಾಣೆಯಲ್ಲಿ ನಡೆದಿದೆ. ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಡ್ರಗ್ಸ್ ಅಮಲಿನಲ್ಲಿದ್ದಾಳೆಂದು ಶಂಕಿಸಿ ಯುವತಿಯನ್ನು ಸೆಪ್ಟೆಂಬರ್​ 1 ರಂದು ಕದ್ರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಮಾನಸಿಕ ಅಸ್ವಸ್ಥ ಯುವತಿ ಜೊತೆಗೆ ಇಲ್ಲಿನ ಪೊಲಿಸ್​​ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ್ದಾರೆ, ಆರೋಪಿ ಅಲ್ಲದಿದ್ದರೂ ಯುವತಿ ಕೈಯನ್ನು ಹಿಂದಕ್ಕೆ ಕಟ್ಟಿ ಕೋಳ ತೊಡಿಸಿ ಹಿಂಸೆ ನೀಡಿದ್ದಾರೆ.

ಇದನ್ನೂ ಓದಿ: ಕೋಟ್ಯಾಂತರ ರೂ. ವಂಚನೆ ಆರೋಪ: ಚೈತ್ರ ಕುಂದಾಪುರ ಪೊಲೀಸ್​ ವಶಕ್ಕೆ!

ನಗರದಲ್ಲಿನ ಮೆಡಿಕಲ್ ಗೆ ಬಂದಿದ್ದ ಯುವತಿಯನ್ನು ಡ್ರಗ್ಗಿಸ್ಟ್ ಎಂದು ತಿಳಿದು ಅಬಕಾರಿ ಇಲಾಖೆ ಅಧಿಕಾರಿಗಳು ಯುವತಿ ವಿರುದ್ಧವೇ ಕದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಡ್ರಗ್ಸ್ ಟೆಸ್ಟ್ ನೆಗೆಟಿವ್ ಬಂದ ಬಳಿಕ ಆಕೆ ಮಾನಸಿಕ ಅಸ್ವಸ್ಥೆ ಎಂದು ತಿಳಿದುಬಂದಿದೆ.

ಪೊಲೀಸರ ದುರ್ವರ್ತನೆ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಂಗಳೂರು ಪೊಲೀಸ್ ಆಯುಕ್ತರಿಂದ ವರದಿ ಕೇಳಿದೆ. ಇದೇ ವೇಳೆ ಠಾಣೆಯೊಳಗಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ಯುವತಿ ಮಾನಹಾನಿ ಮಾಡಿದ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯ ಹೆಚ್ಚಾಗಿದೆ.

RELATED ARTICLES

Related Articles

TRENDING ARTICLES