Monday, December 23, 2024

2 ಲಕ್ಷಕ್ಕೂ ಅಧಿಕ ದಾಳಿಂಬೆ ಕಳ್ಳತನ ; ಸಿಸಿ ಕ್ಯಾಮರದಲ್ಲಿ ಸೆರೆ

ವಿಜಯಪುರ : ರೈತನೊರ್ವನ ಜಮೀನಿನಲ್ಲಿ ರಾತ್ರಿ ವೇಳೆ 2 ಲಕ್ಷಕ್ಕೂ ಅಧಿಕ ದಾಳಿಂಬೆ ಹಣ್ಣು ಕಳ್ಳತನ ಮಾಡಿರುವ ಕದೀಮರು ಘಟನೆ ತಾಲೂಕಿನ ಜುಮನಾಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ದಾಳಿಂಬೆ ಬೆಳೆಗಾರ ಮಹಾದೇವ್ ಚೆನ್ನಶೆಟ್ಟಿ ಎಂಬುವವರ ಜಮೀನಿನಲ್ಲಿ ದಾಳಿಂಬೆ ಹಣ್ಣುಗಳನ್ನು ಬೆಳೆದಿದ್ದರು. ಒಂದು ಬಾಕ್ಸ್​ ದಾಳಿಂಬೆಗೆ 2 ಸಾವಿರವರೆಗೂ ಮಾರುಕಟ್ಟೆಗಳಲ್ಲಿ ಬಂಪರ್ ಬೆಲೆ ಇತ್ತು. ಈ ಹಿನ್ನೆಲೆ ನಿನ್ನೆ ರಾತ್ರೋ ರಾತ್ರಿ ಕಳ್ಳರ ಗುಂಪುವೊಂದು ಮಹಾದೇವ್ ಅವರ ಜಮೀನಿಗೆ ನುಗ್ಗಿದ್ದು, 2 ಲಕ್ಷಕ್ಕೂ ಅಧಿಕ ಮೌಲ್ಯದ ದಾಳಿಂಬೆ ಹಣ್ಣುಗಳನ್ನು ಕದ್ದಿದ್ದಾರೆ.

ಇದನ್ನು ಓದಿ : ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಕತ್ತು ಕೊಯ್ದ ಪಾಗಲ್ ಪ್ರೇಮಿ

ಕಳೆದ ವರ್ಷ ಎರಡು ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆದಿದ್ದು, 28 ಲಕ್ಷ ಆದಾಯ ಸಿಕ್ಕಿತ್ತು, ಆದರೆ ಈ ವರ್ಷ 28 ಲಕ್ಷಕ್ಕೂ ಹೆಚ್ಚು ಆದಾಯ ನಿರೀಕ್ಷೆ ಇತ್ತು.

ಆದರೆ ಈ ರೀತಿ ದಾಳಿಂಬೆ ಹಣ್ಣು ಕಳ್ಳತನ ಮಾಡ್ತಾರೆ ಅಂತ ಅಂದುಕೊಂಡಿರಲಿಲ್ಲ ಎಂದು ರೈತ ಮಹಾದೇವ್ ಅಳಲನ್ನು ಹೇಳಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES