Monday, December 23, 2024

ಅಭಿಮಾನಿಯಿಂದ ಚಾಕೋಲೆಟ್ ಬಾಕ್ಸ್‌ ಕೇಳಿದ ಧೋನಿ: ವೀಡಿಯೋ ವೈರಲ್​!

ಅಮೇರಿಕ: ಕ್ರಿಕೆಟ್ ತಾರೆ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಅವರು ಅಭಿಮಾನಿಯಿಂದ ಚಾಕೋಲೆಟ್ ಬಾಕ್ಸ್‌ ಕೇಳಿ ಪಡೆಯುವ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ.

ಸದ್ಯ ಮಹೇಂದ್ರ ಸಿಂಗ್ ಧೋನಿ ಅಮೇರಿಕಾದಲ್ಲಿ ವಿಹರಿಸುತ್ತಿದ್ದಾರೆ. ವೈರಲ್ ಆಗುತ್ತಿರುವ 6 ಸೆಕೆಂಡಿನ ಈ ಕ್ಲಿಪ್‌ನಲ್ಲಿ ಧೋನಿ ಅಭಿಮಾನಿಯೊಬ್ಬರಿಗೆ ಮಿನಿ ಬ್ಯಾಟ್‌ಗಳಲ್ಲಿ ಸಹಿ ಮಾಡಿ ನೀಡುವ ದೃಶ್ಯವಿದೆ. ಹೀಗೆ ಆಟೋಗ್ರಾಫ್‌ ನೀಡಿದ ಬಳಿಕ ಆ ಅಭಿಮಾನಿಯ ಕೈಯಲ್ಲಿದ್ದ ಚಾಕೋಲೆಟ್ ಬಾಕ್ಸನ್ನು ಧೋನಿ ಕೇಳುತ್ತಾರೆ. `ಚಾಕೋಲೆಟ್‌ಗಳನ್ನು ನೀಡಿ’ ಎಂದು ಮಾಹಿ ಕೇಳುವುದು ವಿಡಿಯೋದಲ್ಲಿ ಕೇಳಿಸುತ್ತದೆ. ಈ ಸಂದರ್ಭದಲ್ಲಿ ಅಲ್ಲಿದ್ದವರು ನಗುವುದನ್ನೂ ಗಮನಿಸಬಹುದು.

ಬಹುಶಃ ಆ ಅಭಿಮಾನಿ ಆಟೋಗ್ರಾಫ್‌ ಕೇಳಿದಾಗ ಧೋನಿಗೆ ನೀಡಲು ಚಾಕೋಲೆಟನ್ನು ಹಿಡಿದುಕೊಂಡಿರಬೇಕು. ತನ್ನ ನೆಚ್ಚಿನ ಕ್ರಿಕೆಟಿಗನನ್ನು ಕಂಡ ಖುಷಿಯಲ್ಲಿ ಅವರಿಗೆ ಚಾಕೋಲೆಟ್ ನೀಡಲು ಮರೆತು ಹೋಗಿರಬಹುದು. ಈ ವೇಳೆ ಧೋನಿಯೇ ಬಾಕ್ಸ್‌ ಕೇಳಿ ಅಲ್ಲಿ ಖುಷಿಯ ಅಲೆ ಮೂಡಿಸಿದ್ದಾರೆ.

RELATED ARTICLES

Related Articles

TRENDING ARTICLES