ವಿಜಯಪುರ : ಸಚಿವ ಡಿ. ಸುಧಾಕರ್ ಅವರ ವಿರುದ್ಧದ ವಂಚನೆ ಹಾಗೂ ಜಾತಿ ನಿಂದನೆ ಆರೋಪವನ್ನು ತಳ್ಳಿ ಹಾಕಿರುವ ಡಿಸಿಎಂ ಡಿ.ಕೆ ಶಿವಕುಮಾರ್ಗೆ ಶಾಸಕ ಬಸನಗೌಡ ಯತ್ನಾಳ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಚೋರ ಗುರು, __________ ಶಿಷ್ಯ! ಯಥಾ ರಾಜ ತಥಾ ಪ್ರಜಾ ಎಂಬ ಅರ್ಥದಲ್ಲಿ ಲೇವಡಿ ಮಾಡಿದ್ದಾರೆ.
ಆಂಧ್ರದಲ್ಲಿ ಮಚ್ಚು ಕೊಡಲಿ ಇಟ್ಕೊಂಡು ಓಡಾಡುವ ‘ರೌಡಿ’, ನಮ್ಮ ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿರುವುದು ದುರಂತ. ನ್ಯಾಯ ಕೇಳಲು ಹೋದವರಿಗೆ ಆವಾಜ್ ಹಾಕಿರುವ ಈ ರೌಡಿ ಮಂತ್ರಿ, ಅವರ ಅಧಿಕಾರವನ್ನು ಇನ್ನೆಷ್ಟು ದುರುಪಯೋಗ ಪಡಿಸಿಕೊಂಡಿರಬಹುದು? ಎಂದು ಪ್ರಶ್ನಿಸಿದ್ದಾರೆ.
‘ರೌಡಿ ಮಂತ್ರಿ’ಯನ್ನು ವಜಾಗೊಳಿಸಿ
ಅಟ್ರಾಸಿಟಿ ಕೇಸು ದಾಖಲಾಗಿರುವ ಕಾರಣ, ಕೂಡಲೇ ಈ ರೌಡಿ ಮಂತ್ರಿಯನ್ನು ಬಂಧಿಸಬೇಕು ಹಾಗೂ ಸಿದ್ದರಾಮಯ್ಯನವರು ಅವರ ಸಂಪುಟದಿಂದ ‘ರೌಡಿ ಮಂತ್ರಿ’ಯನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಇತ್ತ, ಸಚಿವ ಡಿ. ಸುಧಾಕರ್ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೆ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಡಿಕೆಶಿ ಸಮರ್ಥನೆ ಏನು?
ಸಚಿವರ ವಿರುದ್ಧ ಕೇಳಿ ಬಂದಿರುವ ವಂಚನೆ ಆರೋಪಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಳ್ಳಿ ಹಾಕಿದ್ದಾರೆ. ಇದೊಂದು ಸುಳ್ಳು ಪ್ರಕರಣವಾಗಿದೆ. ಸಚಿವರ ರಾಜೀನಾಮೆ ಅಗತ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.