Sunday, December 22, 2024

ಸಲಾಂ..! ಮಾನವೀಯತೆ ಮೆರೆದ KSRTC ಬಸ್ ಕಂಡಕ್ಟರ್

ಬಾಗಲಕೋಟೆ : ಬಸ್​ನಲ್ಲಿ ಹಣ ಕಳೆದುಕೊಂಡವನಿಗೆ ಹಣ ಹಿಂದಿರುಗಿಸಿ ಕೆಎಸ್ಸಾರ್ಟಿಸಿ ಬಸ್​ ಕಂಡಕ್ಟರ್ ಮಾನವೀಯತೆ ಮೆರೆದಿದ್ದಾರೆ.

ಬಾಗಲಕೋಟೆ ಜಿಲ್ಲೆ ಇಳಕಲ್ ಕೆಎಸ್ಸಾರ್ಟಿಸಿ ಡಿಪೋನಲ್ಲಿ ಈ ಅಪರೂಪದ ಘಟನೆ ನಡೆದಿದೆ. ಚನ್ನಬಸಪ್ಪ ಅವರೇ ಮಾನವೀಯತೆ ಮೆರೆದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ಕಂಡಕ್ಟರ್.

ಕರಡಿ ಗ್ರಾಮದ ಯಲ್ಲಪ್ಪ ಕುರಿ ಅವರು ಕೆಎಸ್ಸಾರ್ಟಿಸಿ ಬಸ್​ನಲ್ಲಿ ಪ್ರಯಾಣಿಸಿದ್ದರು. ಈ ವೇಳೆ ಅವರ ಕ್ಯಾರಿಬ್ಯಾಗ್​ ಬಸ್​ನಲ್ಲೇ ಬಿಟ್ಟುಹೋಗಿದ್ದರು. ಆ ಬ್ಯಾಗ್​ನಲ್ಲಿ 10 ಸಾವಿರ ರೂಪಾಯಿ ಹಾಗೂ ಇನ್ನಿತರೆ ದಾಖಲೆ ಇದ್ದವು. ಇನ್ನೇನು ಬ್ಯಾಗ್​ ಇಲ್ಲ, ಹಣವೂ ಇಲ್ಲ ಎಂದು ಮನೆಯತ್ತ ಹೆಜ್ಜೆ ಹಾಕಿದ್ದರು ಯಲ್ಲಪ್ಪ ಕುರಿ.

ಹಣ ತಲುಪಿಸಿದ್ದು ಹೇಗೆ?

ಅಷ್ಟರಲ್ಲಿ ಬಸ್​ನಲ್ಲಿದ್ದ ಬ್ಯಾಗ್ ಚನ್ನಬಸಪ್ಪ ಅವರ ಕಣ್ಣಿಗೆ ಬಿದ್ದಿತ್ತು. ಕೂಡಲೇ ಬ್ಯಾಗ್​ನಲ್ಲಿದ್ದ ಮೊಬೈಲ್ ನಂಬರ್ ತೆಗೆದುಕೊಂಡು ಯಲ್ಲಪ್ಪ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು ಚನ್ನಬಸಪ್ಪ. ಬಳಿಕ, ಹಣ ಕಳೆದುಕೊಂಡವ ಬಸ್ ಸ್ಟ್ಯಾಂಡ್​ಗೆ ಬಂದು ತನ್ನ ಕ್ಯಾರಿ ಬ್ಯಾಗ್ ಹಾಗೂ ಅದರಲ್ಲಿದ್ದ 10 ಸಾವಿರ ರೂ. ಪಡೆದುಕೊಂಡಿದ್ದಾರೆ. ಮಾನವೀಯತೆ ಮೆರೆದ ಕಂಡಕ್ಟರ್​ಗೆ ಕೈಮುಗಿದು ನಮಿಸಿ ಧನ್ಯವಾದ ಅರ್ಪಿಸಿದ್ದಾರೆ.

RELATED ARTICLES

Related Articles

TRENDING ARTICLES