Monday, December 23, 2024

ಡೀಲ್ ರಾಣಿ ‘ಚೈತ್ರಾ’ ಕುಂದಾಪುರ ಹಿನ್ನೆಲೆ ನಿಮಗೆ ಗೊತ್ತಾ?

ಬೆಂಗಳೂರು : ರಾಜ್ಯದ ಜನತೆಗೆ ಇಂದು ಬೆಳ್ಳಂ ಬೆಳಗ್ಗೆ ‘ಚೈತ್ರಾ’ಳ ಪ್ರೇಮಾಂಜಲಿ ದರ್ಶನವಾಗಿದೆ. ನಿಮ್ಗೆ ಎಂಎಲ್​ಎ ಟಿಕೆಟ್ ಕೊಡಿಸುತ್ತೇನೆಂದು ಕೋಟ್ಯಂತರ ರೂಪಾಯಿ ಬಡಿದು ಬಾಯಿಗೆ ಹಾಕಿಕೊಂಡಿದ್ದಾಳೆ ಈ ಕಿಲಾಡಿ ಲೇಡಿ.

ವಂಚನೆ ಆರೋಪದ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅಂಡ್​ ಗ್ಯಾಂಗ್​ ಅನ್ನು ಬೆಂಗಳೂರು ಸಿಸಿಬಿ ಪೊಲೀಸರು ಮಂಗಳವಾರ ರಾತ್ರಿ ಉಡುಪಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಹಾಗಿದ್ರೆ ಯಾರು ಈ ಚೈತ್ರಾ ಕುಂದಾಪುರ ಅನ್ನೋದನ್ನ ನೋಡುವುದಾದರೆ.. ಚೈತ್ರಾ ಕುಂದಾಪುರ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವಳು. ಬಡ ಕುಟುಂಬದಲ್ಲಿ ಹುಟ್ಟಿದ ಇವಳ ತಂದೆ ತಾಯಿ ಹೈನುಗಾರಿಕೆ ಕೆಲಸ ಮಾಡುತ್ತಿದ್ದಾರೆ. 

ಪತ್ರಿಕೋದ್ಯಮ ವಿಭಾಗದಲ್ಲಿ ಪದವಿ

ಚೈತ್ರ ಕುಂದಾಪುರ ತನ್ನ ಪದವಿ ಪೂರ್ವದವರೆಗಿನ ಶಿಕ್ಷಣವನ್ನು ಕುಂದಾಪುರದಲ್ಲಿಯೇ ಮುಗಿಸಿದ್ದಳು. ಪದವಿ ಮತ್ತು ಸ್ನಾತಕೊತ್ತರ ಪದವಿಯನ್ನು ಪತ್ರಿಕೋದ್ಯಮ ವಿಭಾಗದಲ್ಲಿ ಮಂಗಳೂರಿನ ಕೊಣಾಜೆಯ(ಮಂಗಳೂರು ವಿಶ್ವವಿದ್ಯಾನಿಲಯ)ಲ್ಲಿ ಪೂರ್ಣಗೊಳಿಸಿದ್ದಾಳೆ. ಆಗಲೇ ಈಕೆ ಎಬಿವಿಪಿ ಪ್ರತಿಭಟನೆಯಲ್ಲಿ ಮುಂಚೂಣಿ ಆಗಿದ್ದಳು.

ಹಲವು ಸುದ್ದಿ ವಾಹಿನಿಗಳಲ್ಲಿ ಕೆಲಸ

ಆರಂಭದಲ್ಲಿಯೇ ಎಬಿವಿಪಿ ಹುಡಗರ ಜೊತೆ ಗುರುತಿಸಿಕೊಂಡಿದ್ದ ಚೈತ್ರಾ, ಪದವಿ ಶಿಕ್ಷಣ ಪಡೆಯುವ ಸಮಯದಲ್ಲಿ ಪೂರ್ಣ ಪ್ರಮಾಣದಲ್ಲಿ ಎಬಿವಿಪಿಯಲ್ಲಿ ತೊಡಗಿಸಿಕೊಂಡಿದ್ದಳು. ಎಬಿವಿಪಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಚೈತ್ರಾ, ಎಬಿವಿಪಿಯಲ್ಲಿ ವಿವಿಧ ಜವಾಬ್ದಾರಿಯನ್ನು ಕೂಡ ನಿರ್ವಹಿಸಿದ್ದಳು. ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡಿಕೊಂಡಿದ್ದ ಚೈತ್ರ ಕುಂದಾಪುರ, ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಳು. ತನ್ನ ದ್ವೇಷಕಾರುವ ಭಾಷಣದ ಮೂಲಕವೇ ಹೆಸರು ಮಾಡಿದ್ದಳು.

RELATED ARTICLES

Related Articles

TRENDING ARTICLES