Wednesday, January 22, 2025

ಬಸ್ ಗೆ ಬೈಕ್ ಡಿಕ್ಕಿ ; ಚಾಲಕನ ಸಮಯ ಪ್ರಜ್ಞೆಗೆ ಸಾರ್ವಜನಿಕರ ಮೆಚ್ಚುಗೆ

ಯಾದಗಿರಿ : ವೇಗವಾಗಿ ಚಲಿಸಿಕೊಂಡು ಬಂದ ದ್ವಿಚಕ್ರ ವಾಹನವೊಂದು ಬಸ್​ಗೆ ಡಿಕ್ಕಿ ಹೊಡೆದ ಬೈಕ್ ಸವಾರ ಘಟನೆ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಯಾದಗಿರಿಯಿಂದ ಶಹಾಪುರಕ್ಕೆ ಹೊರಟಿದ್ದ ಸಾರಿಗೆ ಬಸ್. ಈ ವೇಳೆ ಬೈಕ್​ ಸವಾರನೊಬ್ಬ ಅತೀ ವೇಗದಲ್ಲಿ ಬೈಕ್​ನ್ನು ಚಲಾಯಿಸಿಕೊಂಡು ಬಂದ ಹಿನ್ನೆಲೆ ಗ್ರಾಮದ ಹೊರವಲಯದ ಸೀಮೆ ಮಾರೆಮ್ಮ ದೇವಸ್ಥಾಸದ ಬಳಿ ಸಾರಿಗೆ ಬಸ್​ಗೆ ಭೀಕರವಾಗಿ ಡಿಕ್ಕಿ ಹೊಡೆದಿದ್ದಾನೆ.

ಈ ಅಪಘಾತದ ಪರಿಣಾಮ ಸಾರಿಗೆ ಬಸ್ ಮುಂಭಾಗದ ಟಾಯರ್ ನಡಿ ಸಿಲುಕಿ ಬೈಕ್ ಅಪ್ಪಾಚಿಯಾಗಿದೆ. ಆದರೆ ಅದೃಷ್ಟವಶಾತ್ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಅಪಘಾತ ತಪ್ಪಿಸಲು ಬಸ್​ನ್ನು ಗದ್ದೆಗೆ ಇಳಿಸಿದ್ದರಿಂದ, ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಬಚಾವ್ ಆಗಿದ್ದಾನೆ. ಸದ್ಯ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ಇದನ್ನು ಓದಿ : ಗುಡ್ ನ್ಯೂಸ್ : ಡೆಲಿವರಿ ಬಾಯ್ಸ್​ಗೆ 2 ಲಕ್ಷ ಜೀವ ವಿಮೆ, 2 ಲಕ್ಷ ಅಪಘಾತ ವಿಮೆ ಸೌಲಭ್ಯ

ಈ ಘಟನೆಗೆ ಬೈಕ್ ಸವಾರನ ಅಜಾಗರುಕತೆ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ. ಇನ್ನೂ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES