Monday, December 23, 2024

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಕತ್ತು ಕೊಯ್ದ ಪಾಗಲ್ ಪ್ರೇಮಿ

ಆನೇಕಲ್ :  ಪ್ರೀತಿ ನಿರಾಕರಿಸಿದ್ದ ಹಿನ್ನೆಲೆ ಯುವತಿಯ ಕತ್ತಿಗೆ ಚಾಕು ಹಾಕಿದ ಪಾಗಲ್ ಪ್ರೇಮಿ ಘಟನೆ ಅತ್ತಿಬೆಲೆ ಪೋಲಿಸ್ ಠಾಣಾ ಸಮೀಪ ನಡೆದಿದೆ.

ಜಯಲಕ್ಚ್ಮೀ (22) ಹಲ್ಲೆಗೊಳಗಾದ ಯುವತಿ. ಹಾಗೂ ಶ್ರೀನಿವಾಸ್ (24) ಆರೋಪಿ. ಎಂಬ ಇಬ್ಬರು ಕಳೆದ ಮೂರ್ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದರ ಬೆನ್ನಲ್ಲೇ ಕಳೆದ ಒಂದು ವಾರದ ಹಿಂದೆ ಬಾಗೇಪಳ್ಳಿಯಿಂದ ಅತ್ತಿಬೆಲೆಗೆ ಆಗಮಿಸಿದ್ದ ಯುವತಿ, ಅತ್ತಿಬೆಲೆ ಪೋಲಿಸ್ ಠಾಣೆ ಪಕ್ಕದ ಖಾಸಗಿ ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಬಳಿಕ ಜಯಲಕ್ಷ್ಮೀಯನ್ನು ಹುಡುಕಿಕೊಂಡು ಎರಡು ದಿನಗಳ ಹಿಂದೆ ಅತ್ತಿಬೆಲೆಗೆ ಶ್ರೀನಿವಾಸ್ ಕೂಡ ಬಂದಿದ್ದನು.

ಇದನ್ನು ಓದಿ : ಡೀಲ್ ರಾಣಿ ‘ಚೈತ್ರಾ’ ಕುಂದಾಪುರ ಹಿನ್ನೆಲೆ ನಿಮಗೆ ಗೊತ್ತಾ?

ಯುವತಿ ಸರಿಯಾಗಿ ತನ್ನ ಜೊತೆ ಮಾತನಾಡುತ್ತಿಲ್ಲ ಎಂಬ ಕಾರಣದಿಂದ ಯುವತಿಯ ರೂಮ್ ಬಳಿ ಹೋಗಿ ಗಲಾಟೆ ಕೂಡ ಮಾಡಿದ್ದನು. ಬಳಿಕ ಯುವತಿ ಕೆಲಸ ಮಾಡುತ್ತಿದ್ದ ಹೋಟೆಲ್​ಗೆ ಹುಡುಕಿಕೊಂಡು ಬಂದು ಹೋಟೆಲ್ ಬಳಿ ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಯುವತಿಯು ಅವನ ಪ್ರೀತಿಯನ್ನು ನಿರಾಕರಿಸುತ್ತಿದ್ದಂತೆ ಜಯಲಕ್ಷ್ಮೀ ಕುತ್ತಿಗೆಗೆ ಚಾಕುವಿನಿಂದ ಬರ್ಬರವಾಗಿ ಹಲ್ಲೆ ಮಾಡಿದ್ದಾನೆ.

ಬಳಿಕ ಯುವತಿಗೆ ಚಾಕುವಿನಿಂದ ಇರಿಯುತ್ತಿದ್ದಾಗ ಹೋಟೆಲ್ ಒಳಗಿಂದ ನೋಡಿದ್ದ ನವೀನ್ ಎಂಬುವವರು, ಯುವತಿಯ ಪ್ರಾಣ ಉಳಿಸಲು ಮುಂದಾಗಿದ್ದಾನೆ. ಶ್ರೀನಿವಾಸ್ ಬಳಿ ಇದ್ದ ಚಾಕು ಕಿತ್ತುಕೊಳ್ಳಲು ಹೋಗಿ, ನವೀನ್ ಕೈಗೂ ಚಾಕುವಿನಿಂದ ಇರಿದ ಪಾಗಲ್ ಪ್ರೇಮಿ.

ಬಳಿಕ ಗಾಯಾಳು ಯುವತಿಯನ್ನು ಆಕ್ಸ್‌ಫರ್ಡ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಇನ್ನೂ ಗಲಾಟೆ ಬಿಡಿಸಲು ಹೋಗಿ ಹಲ್ಲೆಗೊಳಗಾದ ಯುವಕನನ್ನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಸಿಲಾಗಿದೆ. ಸದ್ಯ ಆರೋಪಿಯನ್ನು ಅತ್ತಿಬೆಲೆ ಪೋಲಿಸರು ಬಂಧಿಸಿದ್ದಾರೆ. ಹೋಟೆಲ್ ಯುವಕ ನವೀನ್ ಕಾರ್ಯಕ್ಕೆ ಅಡಿಷನಲ್ ಎಸ್ ಪಿ ಎಂ ಎಲ್ ಪುರುಷೋತ್ತಮ್​ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES