ಬೆಂಗಳೂರು : ಕಾಂಗ್ರೆಸ್ ಸರ್ಕಾರ ನೀಡಿರುವ ಅನ್ನಭಾಗ್ಯ ಯೋಜನೆಯಲ್ಲಿ 5.19 ಲಕ್ಷ ಫಲಾನುಭವಿಗಳ ಹೆಸರು ಡಿಲೀಟ್ ಆಗಿದೆ. ಆಹಾರ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ರೇಷನ್ ಕಾರ್ಡ್ನಿಂದ ಒಂದೇ ತಿಂಗಳಲ್ಲಿ ಹೆಸರು ಡಿಲೀಟ್ ಮಾಡಿರುವುದು ಕಂಡುಬಂದಿದೆ.
ಸತ್ತವರ ಹೆಸರಿನಲ್ಲಿ ಪಡಿತರ ಮತ್ತು DBT ಮೂಲಕ ಹಣ ಜಮೆಯಾಗಿದೆ. ಹಣ ಪಡೆಯುತ್ತಿದ್ದ 5.19 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಅನರ್ಹಗೊಳಿಸಲಾಗಿದೆ. ಸರಕಾರದ ಬೊಕ್ಕಸಕ್ಕೆ ಆಗುತ್ತಿದ್ದ ನಷ್ಟವನ್ನ ಆಹಾರ ಇಲಾಖೆ ತಡೆದಿದೆ.
ಇದನ್ನೂ ಓದಿ: ಅಕ್ರಮ ಆಸ್ತಿಗಳಿಕೆ: ದೇವನಹಳ್ಳಿ ತಹಶಿಲ್ದಾರ್ ಶಿವರಾಜ್ ಅಮಾನತು!
ಆಹಾರ ಇಲಾಖೆಗೆ ಈ ಬಗ್ಗೆ ಸಾಕಷ್ಟು ದೂರು ಬಂದಿದ್ದವು. ಜುಲೈ ತಿಂಗಳಿಂದ ಆಗಸ್ಟ್ವರೆಗೆ ಕಾರ್ಯಚರಣೆ ಮಾಡಿ ಹೆಸರನ್ನ ಡಿಲೀಟ್ ಮಾಡಿದ್ದಾರೆ. ಸತ್ತವರ ಹೆಸರು ಡಿಲೀಟ್ ಮಾಡಿಸಬೇಕೆಂದು ಹೇಳಿದ್ರು ಮಾಡಿರಲಿಲ್ಲ. ಜನನ- ಮರಣ ನೋಂದಾಣಿ ಇ- ಜನ್ಮ ವಿಭಾಗ ಮಾಹಿತಿ ಪಡೆದು ಡಿಲೀಟ್ ಮಾಡಲಾಗಿದೆ.