Thursday, December 19, 2024

ತಮಿಳುನಾಡು ಸರ್ಕಾರಿ ಬಸ್ಸಿಗೆ ಬೆಂಗಳೂರಿನಲ್ಲಿ ಕಲ್ಲು ತೂರಾಟ!

ಬೆಂಗಳೂರು : ತಮಿಳುನಾಡು ಸರ್ಕಾರಿ ಸಾರಿಗೆ ಬಸ್ಸಿಗೆ ಕಿಡಿಗೇಡಿಗಳು ಕಲ್ಲು ತೂರಿರುವ ಘಟನೆ ಸೆಪ್ಟೆಂಬರ್​ 11 ರ ಮಧ್ಯರಾತ್ರಿ 2.45 ರ ಸುಮಾರಿಗೆ ನಡೆದಿದೆ.

ಇದನ್ನೂ ಓದಿ: ಅಕ್ರಮವಾಗಿ ರಕ್ತ ಚಂದನ ಸಾಗಿಸುತ್ತಿದ್ದ ಕಾರು​ ಅಪಘಾತ!

ಸೋಮವಾರ ತಡರಾತ್ರಿ ಬೆಂಗಳೂರಿನ ಸ್ಯಾಟಲೈಟ್​ ನಿಲ್ದಾಣದ ಸಮೀಪವಿರುವ ಭಾರತ್​ ಪೆಟ್ರೋಲ್​ ಬಂಕ್​ ಬಳಿ ತಮಿಳುನಾಡು ಸರ್ಕಾರಿ ಸಾರಿಗೆಗೆ ಸೇರಿದ ನಾಲ್ಕು ಬಸ್​ ಗಳ ಮೇಲೆ ಕಿಡಿಗೇಡಿಗಳು ಕಲ್ಲುತೂರಿದ್ದಾರೆ. ಇದರಿಂದಾಗಿ ಬಸ್ಸಿನ ಬಲಭಾಗದ ಕಿಟಕಿಗೆ ಡ್ಯಾಮೇಜ್​ ಆಗಿದೆ.

ಚಾಲಕ ಗುಣಶೇಖರನ್ ನೀಡಿದ ದೂರಿನ ಆಧಾರದ ಮೇಲೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಮುಂದಾಗಿರುವ ಪೊಲೀಸರು ಮುಂದಾಗಿದ್ದಾರೆ.

RELATED ARTICLES

Related Articles

TRENDING ARTICLES