Wednesday, January 22, 2025

ಇಷ್ಟು ಬೇಗ ಸಿದ್ದು ಸರ್ಕಾರ ಜನಪ್ರಿಯತೆ ಕಳೆದುಕೊಳ್ಳುತ್ತದೆ ಎಂದುಕೊಂಡಿರಲಿಲ್ಲ: ಬಿಎಸ್​ವೈ

ಬೆಂಗಳೂರು : ಇಷ್ಟು ಬೇಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತದೆ ಎಂದು ತಿಳಿದುಕೊಂಡಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡ್ಯೂರಪ್ಪ ಹೇಳಿದರು.

ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಬಹಳ ಕಡಿಮೆ ಅವಧಿಯಲ್ಲೆ ಸಿದ್ದರಾಮಯ್ಯ ಸರ್ಕಾರ ಜನಪ್ರಿಯತೆಯನ್ನು ಕಳೆದುಕೊಂಡು ಜನರಿಂದ ಛೀಮಾರಿಯನ್ನು ಹಾಕಿಸಿಕೊಳ್ಳುವ ಪರಿಸ್ಥಿತಿಗೆ ಬಂದು ನಿಂತಿದೆ. ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳಿದ್ದರೂ ಈ ಸರ್ಕಾರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಮುಂದುವರೆಯುತ್ತಿದೆ ಎಂದು ಕಿಡಿಕಾರಿದರು.

ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರೊಂದಿಗೆ ರಾಜ್ಯಾದ್ಯಂತ ಪ್ರವಾಸ ಮಾಡಿ ರಾಜ್ಯದ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಬೇಕು ಎಂದು ಇಂದಿನ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ರಾಜಕೀಯ ಬೆಳವಣಿಗೆಗಳು ಮತ್ತು ಚುನಾವಣೆಯ ರೂಪುರೇಷೆಗಳ ಕುರಿತು ಬಿಜೆಪಿ ಮುಖಂಡರೊಂದಿಗೆ ಸಭೆಯನ್ನು ಚರ್ಚೆ ನಡೆಸಿದ್ದೇವೆ. ಇದೇ ವೇಳೆ ಮುಂದಿನ ಹೋರಾಟದ ಹಾದಿ ಏನು ಎಂಬುದನ್ನು ತಿರ್ಮಾನಿಸಲಾಗಿದೆ ಎಂದರು.

ಇದನ್ನೂ ಓದಿ: ಜನ ಸಂಪರ್ಕ ಸಭೆ ನಡೆಸಿ ಜನರಿಗೆ ಸ್ಪಂದಿಸಿ: ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ!

ನಾಳೆ ದೆಹಲಿ ಪ್ರವಾಸ : 

ಚುನಾವಣಾ ಸಮಿತಿ ಸಭೆ ಇರುವ ಕಾರಣ ನಾಳೆ ನಾನು ದೆಹಲಿ ಪ್ರವಾಸ ಕೈಗೊಳ್ಳಲಿದ್ದೇನೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಕುರಿತು ಕೇಂದ್ರದ ಮುಖಂಡರಾದ ಅಮಿತ್​ ಶಾ ಮೋದಿಜಿ ತೀರ್ಮಾನ ಕೈಗೊಳ್ಳುವರಿ ಎಂದು ಅವರು ಹೇಳಿದರು.

ಈ ವೇಳೆ  ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಪರಿಷತ್​ ಸದಸ್ಯ ಎನ್​ ರವಿಕುಮಾರ್​ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES