Sunday, December 22, 2024

ಈಜಲು ಹೋದ ಯುವಕರು ನೀರುಪಾಲು!

ಶಿವಮೊಗ್ಗ : ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಯುವಕರು ನೀರುಪಾಲಾಗಿರುವ ಘಟನೆ ತೀರ್ಥಹಳ್ಳಿಯ ಭೀಮನಕಟ್ಟೆ ಬಳಿ ಘಟನೆ.

ಬೆಂಗಳೂರು ಮೂಲದ ಗೌತಮ್ (26), ಸುಜಯ್ (28) ನೀರು‌ ಪಾಲಾದ ಯುವಕರು. ತೀರ್ಥಹಳ್ಳಿ ಭಾಗಕ್ಕೆ ಪ್ರವಾಸಕ್ಕೆ ಬಂದಿದ್ದ ಯುವಕರು ನಿನ್ನೆ ಸಂಜೆ ನದಿಯಲ್ಲಿ ಈಜಲು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ: ಬುಮ್ರಾಗೆ ಪಾಕ್​ ವೇಗಿ ಶಾಹೀನ್ ಅಫ್ರಿದಿನಿಂದ ವಿಶೇಷ ಉಡುಗೊರೆ

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು ನುರಿತು ಈಜುಗಾರರಿಂದ ಯುವಕರ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯಿತು ಈ ವೇಳೆ ಗೌತಮ್ (26) ಮೃತದೇಹ ಪತ್ತೆಯಾಗಿದ್ದು ಮತ್ತೊಬ್ಬ ಯುವಕ ಸುಜಯ್ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ.

ಈ ಘಟನೆಯೂ ಆಗುಂಬೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES

Related Articles

TRENDING ARTICLES