Monday, December 23, 2024

ಬುಮ್ರಾಗೆ ಪಾಕ್​ ವೇಗಿ ಶಾಹೀನ್ ಅಫ್ರಿದಿನಿಂದ ವಿಶೇಷ ಉಡುಗೊರೆ

ಕ್ಯಾಂಡಿ : ಕಳೆದ ವಾರವಷ್ಟೇ ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ದಂಪತಿಗಳಿಗೆ ಗಂಡು ಮಗು ಜನಿಸಿತ್ತು. ಹೀಗಾಗಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಬುಮ್ರಾ, ನೇಪಾಳ ವಿರುದ್ಧದ ಪಂದ್ಯಕ್ಕೆ ಗೈರಾಗಿ ಭಾರತಕ್ಕೆ ವಾಪಸ್ಸಾಗಿದ್ದರು.

ಆ ಬಳಿಕ ಮಗು ಹಾಗೂ ಮಡದಿಯೊಂದಿಗೆ ಸಮಯ ಕಳೆದಿದ್ದ ಯಾರ್ಕರ್ ಕಿಂಗ್, ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡವನ್ನು ಸೇರಿಕೊಂಡಿದ್ದರು. ಪ್ರಸ್ತುತ ಉಭಯ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದೂ, ಮಳೆಯಿಂದಾಗಿ ಪಂದ್ಯ ನಿಂತ ಬಳಿಕ ತಂದೆಯಾದ ಖುಷಿಯಲ್ಲಿರುವ ಬುಮ್ರಾ ಅವರ ಬಳಿಗೆ ಆಗಮಿಸಿದ ಪಾಕಿಸ್ತಾನದ ಸ್ಟಾರ್ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಅವರು ಬುಮ್ರಾಗೆ ವಿಶೇಷ ಉಡುಗೊರೆ ನೀಡಿ ತಾಯಿ ಮತ್ತು ಮಗುವಿನ ಕುಶಲೋಪರಿ ವಿಚಾರಿಸಿದರು.

ಮಳೆಯಿಂದಾಗಿ ಭಾನುವಾರದ ಪಂದ್ಯವನ್ನು ಮುಂದೂಡಿದ ನಂತರ, ಎರಡೂ ತಂಡಗಳು ಹೋಟೆಲ್‌ಗೆ ವಾಪಸ್ಸಾಗುತ್ತಿದ್ದವು. ಈ ವೇಳೆ ವಿಶೇಷ ಉಡುಗೊರೆಯನ್ನು ಹೊಂದಿರುವ ಬಾಕ್ಸ್‌ನೊಂದಿಗೆ ಬುಮ್ರಾ ಬಳಿಗೆ ಬಂದ ಶಾಹೀನ್, ಬುಮ್ರಾಗೆ ಆ ಉಡುಗೊರೆಯನ್ನು ನೀಡಿ ತಂದೆಯಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದರು. ವಿಶೇಷ ಉಡುಗೊರೆಗಾಗಿ ಶಾಹೀನ್‌ಗೆ ಧನ್ಯವಾದ ಅರ್ಪಿಸಿದ ಬುಮ್ರಾ, ಈ ಪ್ರೀತಿಯ ಗೆಸ್ಚರ್‌ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES