Wednesday, January 22, 2025

ರ್ಯಾಪಿಡೋ ಚಾಲಕನಿಗೆ ಪ್ರತಿಭಟನಾ ಕಾರರಿಂದ ಹಲ್ಲೆ!

ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ದ ಖಾಸಗಿ ಸಾರಿಗೆ ಸಂಘಟನೆಗಳು ಬಂದ್​​ಗೆ ಕರೆಕೊಟ್ಟಿದೆ. ಈ ಹಿನ್ನೆಲೆ ಬೆಂಗಳೂರಿನಾದ್ಯಂತ ಪ್ರತಿಭಟನೆಯ ಕಾವು ಹೆಚ್ಚಾಗಿದ್ದು ಆನಂದ್​ ರಾವ್​ ಸರ್ಕಲ್​ ಬಳಿ ರ್ಯಾಪಿಡೋ ಬೈಕ್​ ಸವಾರನ ಮೇಲೆ ಪ್ರತಿಭಟನಾ ನಿರತರು ಹಲ್ಲೆ ನಡೆಸಿದ್ದಾರೆ.

ಆನಂದ್​ರಾವ್​ ಸರ್ಕಲ್​ ಫ್ಲೈಒವರ್​ ಬಳಿ ಪ್ರತಿಭಟನಾ ನಿರತರ ನಡುವೆ ಭೈಕ್​ ನಲ್ಲಿ ನುಗ್ಗಲು ಮುಂದಾದಾಗ ಬೈಕ್​ ಸವಾರನ ಮೇಲೆ ಹಲ್ಲೆ ನಡೆಸಿದ್ದಾರೆ, ಬೈಕ್​ ಸವಾರನ ವಾಹನವನ್ನು ಫ್ಲೈಓವರ್​ ಗೋಡೆಗೆ ಗುದ್ದಿ ಚಾಲಕರು ತಮ್ಮ ಆಕ್ರೋಶವನ್ನು ಪ್ರತಿಭಟನಾಕಾರರು ಹೊರಹಾಕಿದ್ದಾರೆ. ಈ ವೇಳೆ ವಾಹನ ಸವಾರ ಮತ್ತು ಪ್ರತಿಭಟನಾ ನಿರತರ ನಡುವೆ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ: ಬೆಳ್ಳಂ ಬೆಳಗ್ಗೆ ರೌಡಿಶೀಟರ್​ಗಳ ಮನೆ ಮೇಲೆ ಪೊಲೀಸ್​ ದಾಳಿ!

ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಿಂದಾಗಿ ಖಾಸಗಿ ಸಾರಿಗೆಗೆ ಬಾರಿ ಹೊಡೆತ ಬಿದ್ದದೆ ಈ ಹಿನ್ನೆಲೆಲ್ಲಿ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳು ಇಂದು ಬಂದ್​ಗೆ ಕರೆನೀಡಿದೆ.

RELATED ARTICLES

Related Articles

TRENDING ARTICLES