Sunday, December 22, 2024

ಸನಾತನ ಧರ್ಮ ವಿವಾದ : ಉದಯನಿಧಿ ಸ್ಟಾಲಿನ್​ಗೆ ಕೋಡಿಶ್ರೀ ನೀತಿಪಾಠ

ಹುಬ್ಬಳ್ಳಿ : ‘ಪೂರ್ಣವಾದ ಅರಿವಿನ ಕೊರತೆಯಿಂದಾಗಿ ಈ ರೀತಿ ಧರ್ಮ, ರಾಜಕೀಯ ವಿಚಾರ ಮುನ್ನೆಲೆಗೆ ತರುತ್ತಾರೆ. ಧರ್ಮ‌ ಎಂದರೆ ನೆಮ್ಮದಿ,‌ ಶಾಂತಿ ನಿಜವಾದ ಜ್ಞಾನ ಮೂಡಿಸುತ್ತದೆ. ಆದರೆ, ಅದರಲ್ಲಿ ನೆಮ್ಮದಿ, ಶಾಂತಿ ಕಂಡುಕೊಳ್ಳದವರಿಂದ‌ ಈ ರೀತಿ ಅಸಮಾಧಾನ‌ ಮೂಡುತ್ತದೆ’ ಉದಯನಿಧಿ ಸ್ಟಾಲಿನ್​ಗೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ ನೀತಿಪಾಠ ಮಾಡಿದ್ದಾರೆ.

ಸನಾತನ ಧರ್ಮದ ವಿವಾದ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ಇದು ಅವರವರ ಧರ್ಮದವರ ಹೇಳಿಕೆ, ಅದು ಅವರ ‌ನೋವಿನ ಸಂಗತಿ. ಎಲ್ಲಾ ಜನಾಂಗದಲ್ಲಿಯೂ ಅವರವರ ನೋವು ಇರುತ್ತದೆ. ಅದನ್ನು ಈ ರೀತಿ ನೋವಿನ‌ ಮೂಲಕ ಹೊರಹಾಕುತ್ತಾರೆ ಎಂದು ಹೇಳಿದ್ದಾರೆ.

ಧರ್ಮದ ವಿಚಾರದಲ್ಲಿ ರಾಜಕೀಯ ಬೆರೆಸುವುದು ಸೂಕ್ತವಲ್ಲ. ಉದಯನಿಧಿ ಸ್ಟಾಲಿನ್ ಅವರಿಗೆ ಯಾವ ನೋವಿದೆ? ಯಾವ ನೋವಿನಿಂದ ಈ ರೀತಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಆಯಾ ಧರ್ಮದಲ್ಲಿರುವವರು ತಮಗಾಗಿರೋ‌ ನೋವಿನಿಂದಾಗಿ ಈ ರೀತಿ ‌ಹೇಳಿಕೆ ನೀಡುತ್ತಾರೆ. ಜನರಲ್ಲಿ ಪೂರ್ಣವಾದ ಜ್ಞಾನದ‌ ಕೊರತೆ ಇದೆ. ಧರ್ಮದ ವಿಚಾರವಾಗಿ ಹೇಳಿಕೆ ನೀಡೋರು ಯಾಕೆ‌ ನೊಂದಿದ್ದಾರೆ ಅವರೇ ಹೇಳಬೇಕು ಎಂದು ತಿಳಿಸಿದ್ದಾರೆ.

ಮನುಷ್ಯನ ಅತೃಪ್ತಿಯಿಂದ ಕಚ್ಚಾಟ

ರಾಜ್ಯ ರಾಜಕೀಯದಲ್ಲಿ ಸ್ವಪಕ್ಷದವರಿಂದಲೇ ಕಚ್ಚಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಮನುಷ್ಯನಿಗೆ ಅತೃಪ್ತಿ ಅನ್ನೋದು ಇರುತ್ತದೆ. ಅದು ರಾಜಕೀಯದಲ್ಲಿ ಈ ರೀತಿ ಅಸಮಾಧಾನ ಮೂಡಿಸುವುದು ಸಹಜ ಎಂದರು. ರಾಜ್ಯ ಆರ್ಥಿಕ ದಿವಾಳಿತನಕ್ಕೆ ಹೋಗುತ್ತದೆಯೇ? ಎಂಬ ಪ್ರಶ್ನೆಗೆ, ಆ ರೀತಿ ಏನೂ ಆಗಲ್ಲ, ರಾಜ್ಯ ಸಂಪಬ್ಧರಿತವಾಗಿರುತ್ತದೆ. ಜನಸಾಮಾನ್ಯರಿಗೆ ಸಾಕಷ್ಟು ಅನುಕೂಲಕರವಾಗಿವೆ ಎಂದು ಸರ್ಕಾರವನ್ನು ಕೊಂಡಾಡಿದ್ದಾರೆ.

RELATED ARTICLES

Related Articles

TRENDING ARTICLES