Sunday, September 29, 2024

ಪಾಕ್ ಹುಟ್ಟಡಗಿಸಿದ ಭಾರತ.. ವಿರಾಟ್-ರಾಹುಲ್ ಭರ್ಜರಿ ಶತಕ

ಬೆಂಗಳೂರು : ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಸೂಪರ್-4 ಪಂದ್ಯದಲ್ಲಿ ಬ್ಲೂ ಬಾಯ್ಸ್​ ಬದ್ಧ ವೈರಿ ಪಾಕಿಗಳ ಹುಟ್ಟಡಗಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ರನ್ ಮೆಷಿನ್ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ಅವರ ಸ್ಫೋಟಕ ಶತಕದ ನೆರವಿನಿಂದ ಪಾಕಿಸ್ತಾನಕ್ಕೆ 357 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ.

ನಿನ್ನೆ ಆರಂಭಿಕ ಆಟಗಾರರಾದ ಶುಭುನ್ಮನ್ ಗಿಲ್ ಹಾಗೂ ನಾಯಕ ರೋಹಿತ್ ಶರ್ಮಾ ಪಾಕ್ ಬೌಲರ್​ಗಳನ್ನು ದಂಡಿಸಿದರು. ರೋಹಿತ್ (56) ಹಾಗೂ ಗಿಲ್ (58) ಅವರ ಅರ್ಧಶತಕದ ನೆರವಿನಿಂದ ಭಾರತ ಬೊಂಬಾಟ್ ಆರಂಭ ಪಡೆಯಿತು. ಅರ್ಧಶತಕದ ಬಳಿಕ ಇಬ್ಬರೂ ಪೆವಿಲಿಯನ್​ನತ್ತ ಹೆಜ್ಜೆಹಾಕಿದರು. ಆ ಬಳಿಕ ಪ್ರೇಮದಾಸ ಕ್ರೀಡಾಂಗಣದಲ್ಲಿ ವಿರಾಟ್ ಹಾಗೂ ರಾಹುಲ್ ಸ್ಫೋಟಿಸಿದರು.

47ನೇ ಶತಕ ಸಿಡಿಸಿದ ವಿರಾಟ್

ರನ್ ಮೆಷಿನ್ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್​ ಪಾಕ್ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. 84 ಎಸೆತಗಳಲ್ಲಿ 6 ಬೌಂಡಿರಿ ಹಾಗೂ 2 ಭರ್ಜರಿ ಸಿಕ್ಸರ್ ನೆರವಿನೊಂದಿಗೆ ವಿರಾಟ್ ಕೊಹ್ಲಿ ವಿದ್ವಂಸಕ ಶತಕ ಸಿಡಿಸಿದರು. ಇದು ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 47ನೇ ಶತಕ. ಇತ್ತ, ಕನ್ನಡಿಗ ಕೆ.ಎಲ್ ರಾಹುಲ್ 100 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಬೊಂಬಾಟ್ ಸಿಕ್ಸರ್​ನೊಂದಿಗೆ ಆಕರ್ಷಕ ಶತಕ ಬಾರಿಸಿದರು. ಇದು ಅವರ 6ನೇ ಶತಕವಾಗಿದೆ.

RELATED ARTICLES

Related Articles

TRENDING ARTICLES