ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ದ ಇಂದು ಖಾಸಗಿ ವಾಹನಗಳು ಬಂದ್ಗೆ ಕರೆ ನೀಡಿದ್ದರೂ ನಗರಾದ್ಯಂತ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸರ್ಕಾರದ ಶಕ್ತಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆಯಿಂದ ಖಾಸಗಿ ಸಾರಿಗೆಗೆ ಭಾರಿ ಹೊಡೆತ ಹಿನ್ನೆಲೆ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಖಾಸಗಿ ಸಾರಿಗೆಯ 36 ಕ್ಕೂ ಹೆಚ್ಚು ಸಂಘಟನೆಗಳು ಬಂದ್ಗೆ ಕರೆ ನೀಡಿದೆ.
ಇದನ್ನೂ ಓದಿ: ಇಂದು ಬೆಂಗಳೂರು ಬಂದ್!
ಆದರೇ, ಇಂದು ಬೆಂಗಳೂರಿನ ಹಲವೆಡೆ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇಂದು ಬೆಳಗ್ಗೆಯಿಂದಲೂ ಆಟೋ, ಕ್ಯಾಬ್ ಗಳು ಎಂದಿನಂತೆ ಸಂಚರಿಸುತ್ತಿದೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಕೆಲ ಅಟೋ ಚಾಲಕರು ಪ್ರಯಾಣಿಕರಿಂದ ಹೆಚ್ಚಿಗೆ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೆಳಿ ಬರುತ್ತಿದೆ.
ಇನ್ನೂ ಬೆಂಗಳೂರಿನ ಕೆಆರ್ ಮಾರ್ಕೆಟ್ ನಲ್ಲಿಯೂ ಆಟೋ, ಖಾಸಗಿ ಬಸ್ ಗಳ ಸಂಚಾರ ಎಂದಿನಂತೆ ಸಾಗುತ್ತಿದೆ, ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಪ್ರಯಾಣಿಕರನ್ನು ಒಂದುಕಡೆಯಿಂದ ಮತ್ತೊಂದು ಕಡೆಗೆ ಆಟೋಗಳ ಸಾಗಾಟ ಸಾಮಾನ್ಯವಾಗಿದೆ, ಕಲಾಸಿಪಾಳ್ಯ ಖಾಸಗಿ ಬಸ್ ನಿಲ್ದಾಣದಲ್ಲೂ ಖಾಸಗಿ ವಾಹನಗಳನ್ನು ಸಂಚಾರ ಯಥಾಸ್ಥಿತಿಯಾಗಿದ್ದು ಬೆಂಗಳೂರಿನ ಆಸುಪಾಸಿ ಜಿಲ್ಲೆಗಳಿಗೆ ಖಾಸಗಿ ಬಸ್ ಸೇವೆ ಎಂದಿನಂತೆ ಸರಾಗವಾಗಿ ಸಾಗುತ್ತಿದೆ.