ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಎತ್ತುಗಳು ಸಾವನ್ನಪ್ಪಿದ ಘಟನೆ ನಡೆದಿದೆ.
ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಎತ್ತುಗಳು ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದೆ. ದಿನ ನಿತ್ಯದಂತೆ ಜಮೀನಿನಲ್ಲಿ ಕೆಲಸ ಮಾಡಿ ಮನೆಗೆ ಬಂದು ಎತ್ತುಗಳನ್ನು ಕಟ್ಟಿ ಹಾಕಲಾಗಿತ್ತು. ಕೊಟ್ಟಿಗೆಯಲ್ಲಿದ್ದ ವಿದ್ಯುತ್ ವೈಯರ್ನಿಂದ ಶಾರ್ಟ್ ಸರ್ಕ್ಯೂಟ್ ಕಾಣಿಸಿಕೊಂಡ ಪರಿಣಾಮ ಎತ್ತುಗಳು ಸಾವನ್ನಪ್ಪಿದೆ. ಸ್ಥಳೀಯರ ನೆರವಿನಿಂದ ಎರಡೂ ಎತ್ತುಗಳ ಪೈಕಿ ಒಂದು ಎತ್ತು ಬದುಕಿ ಉಳಿದಿದೆ.
ಇದನ್ನೂ ಓದಿ: ಈಜಲು ಹೋದ ಯುವಕರು ನೀರುಪಾಲು!
ರೈತ ಶ್ರೀಶೈಲ್ ಮಹಾಮನಿ ಎಂಬುವರಿಗೆ ಸೇರಿದ ಎತ್ತುಗಳು ಕಳೆದ ಎರಡು ತಿಂಗಳ ಹಿಂದೆ ಜಮೀನು ಉಳುಮೆಗಾಗಿ ೧ ಲಕ್ಷ 48 ಸಾವಿರ ಹಣ ಕೊಟ್ಟು ಖರೀದಿ ಮಾಡಿ ತಂದಿದ್ದರು. ಎತ್ತು ಸಾವನ್ನಪ್ಪಿದರಿಂದ ರೈತನ ಆಕ್ರಂದನ ಮುಗಿಲುಮುಟ್ಟಿದೆ. ಇನ್ನೂ ರಾಜ್ಯ ಸರ್ಕಾರ ನೆರವು ನೀಡಬೇಕೆಂದು ರೈತ ಶ್ರೀಶೈಲ್ ಮನವಿ ಮಾಡಿದ್ದಾರೆ.
ಸದ್ಯ ಈ ಘಟನೆಯೂ ಕೆಂಬಾವಿ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.