ಬೆಂಗಳೂರು: ಶಕ್ತಿ ಯೋಜನೆಗಳಿಂದಾಗಿ ರಾಜ್ಯಾದ್ಯಂತ ಖಾಸಗಿ ಸಾರಿಗೆಗೆ ಬಾರಿ ಹೊಡೆತ ಬಿದ್ದಿದೆ. ಈ ಹಿನ್ನೆಲೆ ಖಾಸಗಿ ಸಾರಿಗೆ ಸಾಂಕೇತಿಕವಾಗಿ ಇಂದು ಬೆಂಗಳೂರು ಬಂದ್ ನಡೆಸಲು ತೀರ್ಮಾನಿಸಿದ್ದು ಖಾಸಗಿ ವಾಹನಗಳ ಸೇವೆಯನ್ನು ಸ್ಥಗಿತಗೊಳಿಸಿದೆ.
ಸರ್ಕಾರದ ‘ಶಕ್ತಿ’ ಯೋಜನೆ ವಿರುದ್ಧ ‘ಖಾಸಗಿ’ ಸಾರಿಗೆಗಳ ಕುಟುಂಬಗಳು ನಷ್ಟ ಅನುಭವಿಸುತ್ತಿದೆ. ಈ ಹಿನ್ನೆಲೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದೆ. ಈ ಬಂದ್ ಗೆ ಒಟ್ಟು 36 ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು ಬೆಂಗಳೂರು ಬಂದ್ ಯಶಸ್ವಿಗೊಳಿಸಲು ಸಕಲ ತಯಾರಿ ನಡೆಸಿದೆ.
ನಿನ್ನೆ ಮಧ್ಯರಾತ್ರಿಯಿಂದಲೇ ಆಟೋ, ಟ್ಯಾಕ್ಸಿ ಬಂದ್ ಆಗಿದ್ದು ದೂರದೂರುಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೂ, ಏರ್‌ಪೋರ್ಟ್ ಪ್ರಯಾಣಿಕರಿಗೂ ಬಂದ್ ನ ಬಿಸಿ ತಟ್ಟಲಿದೆ.