Sunday, December 22, 2024

ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಪ್ರಯಾಣಿಕರ ಪರದಾಟ!

ಬೆಂಗಳೂರು : ಬೆಂಗಳೂರು ಬಂದ್​  ಹಿನ್ನೆಲೆ ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯ ಸರ್ಕಾರದ ಉಚಿತ ಸಾರಿಗೆ ಸೇವೆಯಿಂದಾಗಿ ಖಾಸಗಿ ವಾಹನಗಳಿಗೆ ಭಾರಿ ಹೊಡೆತ ಉಂಟಾಗಿರುವ ಹಿನ್ನೆಲೆ ರಾಜ್ಯ ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್​ಗೆ ಕರೆ ನೀಡಿದೆ. ಈ ಹಿನ್ನೆಲೆ ನಗರದಾದ್ಯಂತ ಖಾಸಗಿ ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.

ಇದನ್ನೂ ಓದಿ: ಬೆಂಗಳೂರು ಬಂದ್​ ಗೆ ನೀರಸ ಪ್ರತಿಕ್ರಿಯೆ!

ಇನ್ನೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಓಲಾ ಮತ್ತು ಊಬರ್​ ಸೇವೆ ಸಂಪೂರ್ಣ ಬಂದ್​ ಆದ ಹಿನ್ನೆಲೆ ವಿಮಾನ ನಿಲ್ದಾಣದ ಬಳಿ ಪ್ರಯಾಣಿಕರು ಪರಾದಾಡುತ್ತಿದ್ದಾರೆ. ಪ್ರತಿನಿತ್ಯ ಏರ್ಪೋರ್ಟ್ ನ ಓಲಾ ಮತ್ತು ಊಬರ್​ ಪಿಕಪ್ ಪಾಯಿಂಟ್ಸ್ ಗಳಲ್ಲಿ ಗಿಜಿಗುಡುತ್ತಿದ್ದ ಕ್ಯಾಬ್​ ಗಳು ಮಧ್ಯರಾತ್ರಿಯಿಂದ ಸಂಚಾರ ಬಂದ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES