Thursday, January 23, 2025

ಭೇಟೆಯಾಡಲು ಬಂದು ಸೆರೆಯಾದ ಚಿರತೆ

ತುಮಕೂರು : ಭೇಟೆಯಾಡಲೆಂದು ಬರುತ್ತಿದ್ದ ಚಿರತೆಯೊಂದು ಕಸದ ಬುಟ್ಟಿಗೆ ಬಿದ್ದು ಸೆರೆಯಾಗಿರುವ ಘಟನೆ ಸಿದ್ದರಬೆಟ್ಟ ಶೈಲಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟ ಗ್ರಾಮದಲ್ಲಿ ಕೆಲವು ದಿನಗಳಿಂದ ಓಡಾಡುತ್ತಿದ್ದ ಚಿರತೆಯೊಂದು ಇಂದು ಭೇಟೆಯಾಡಲೆಂದು ಬರುತ್ತಿದ್ದ ವೇಳೆ ಯಾಮಾರಿ ಕಸದ ಬುಟ್ಟಿಗೆ ಬಿದ್ದು ಬಿಟ್ಟಿದೆ. ಬಳಿಕ ಕಸದ ಬುಟ್ಟಿಯಿಂದ ಆಚೆ ಬರಲು ಪ್ರಯತ್ನ ಪಟ್ಟರು ಆಗದ ಕಾರಣ ಅಲ್ಲೆ ಒದ್ದಾಡುತ್ತಿದ್ದ ಚಿರತೆ

ಇದನ್ನು ಓದಿ : ಕಾಂಗ್ರೆಸ್​ಗೆ ದಲಿತರು, ಮುಸ್ಲಿಮರೇ ಮತದಾರರು : ಡಾ.ಜಿ ಪರಮೇಶ್ವರ್

ಇನ್ನೂ ಈ ಮಾಹಿತಿ ತಿಳಿದಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿದ್ದು, ಸುರಕ್ಷಿತವಾಗಿ ಚಿರತೆಯನ್ನು ರಕ್ಷಣೆ ಮಾಡಿದ್ದಾರೆ. ಇದು ಕೊರಟಗೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಕಂಡು ಬಂದಿದೆ.

RELATED ARTICLES

Related Articles

TRENDING ARTICLES