ಆಂಧ್ರಪ್ರದೇಶ: ಜನಸೇನಾ ಮುಖ್ಯಸ್ಥ ಮತ್ತು ನಟ ಪವನ್ ಕಲ್ಯಾಣ್ ರನ್ನು ಶನಿವಾರ ರಾತ್ರಿ ಜಗ್ಗಯ್ಯ ಪೇಟ ಪೊಲೀಸರು ಬಂಧಿಸಿದ್ದಾರೆ.
ತೆಲುಗು ದೇಶಂ ಪಕ್ಷದ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಶನಿವಾರ ಮುಂಜಾನೆ ನಂದ್ಯಾಲ್ ಸಿಐಡಿ ಪೊಲೀಸರು ಬಂಧಿಸಿದ್ದರು. ಈ ಸಂಬಂಧ ಚಂದ್ರಬಾಬು ನಾಯ್ಡ ಅವರಿಗೆ ಭೇಟಿಯಾಗಲು ವಿಜಯವಾಡಕ್ಕೆ ಹೋಗುತ್ತಿ ವೇಳೆ ಆಂಧ್ರ ಮತ್ತು ತೆಲಂಗಾಣ ಗಡಿಭಾಗದ ಅನುಮಂಚಿಪಲ್ಲಿ ಬಳಿ ಜಗ್ಗಯ್ಯಪೇಟ್ ಪೊಲೀಸರು ನಟ ಪವನ್ ಕಲ್ಯಾಣ್ ರನ್ನು ಬಂಧಿಸಿದ್ದಾರೆ.
ತಮ್ಮನ್ನು ಬಂಧಿಸಲು ಬಂದ ಪೊಲೀಸರಿಗೆ ನಟ ಪವನ್ ಕಲ್ಯಾಣ್ ತೀವ್ರ ಆಕ್ಷೇಪ ವ್ಯಕಪಡಿಸಿದ್ದಾರೆ. ಆಂಧ್ರ ಪ್ರದೇಶಕ್ಕೆ ಹೋಗಲು ಪಾಸ್ಪೋರ್ಟ್, ವೀಸಾ ಬೇಕಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ತಮ್ಮ ಕಾನ್ವಾಯ್ಯನ್ನು ಮುಂದೆ ಹೋಗಲು ಬಿಡದ ಹಿನ್ನೆಲೆ ಕಾರ್ ನಿಂದ ಕೆಳಗಿಳಿದು ಸಾಗಲು ಮುಂದಾಗಿದ್ದಾರೆ. ಈ ವೇಳೆ ಮತ್ತೆ ತಡೆಯಲು ಮುಂದಾದ ಪೊಲೀಸರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ನಟ ಪವನ್ ಕಲ್ಯಾಣ್ ನಡು ರಸ್ತೆಯಲ್ಲೇ ಮಲಗಿ ತಮ್ಮ ಆಕ್ರೋಶವನ್ನು ಹೊರಹಾಕಿದ್ಧಾರೆ.
ಪವನ್ ಕಲ್ಯಾಣ್ ರನ್ನು ಬಂಧಿಸುತ್ತಿದ್ದಂತೆ ಜಗ್ಗಯ್ಯಪೇಟ ಬಳಿ ಪವನ್ ಅಭಿಮಾನಿಗಳು ಮತ್ತು ಜನಸೇನ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪವನ್ಗೆ ಬೆಂಬಲ ಸೂಚಿಸಿದರು.