Monday, December 23, 2024

ಹಸೆಮಣೆ ಏರಿ ಪರೀಕ್ಷೆಗೆ ಹಾಜರಾದ ನವವಧು

ಶಿವಮೊಗ್ಗ : ವಿದ್ಯಾರ್ಥಿನಿಯೊಬ್ಬಳು ಅಂತಿಮ ವರ್ಷದ ಪರೀಕ್ಷೆ ಹಿನ್ನಲೆ ಬೆಳಗ್ಗೆ ತಾಳಿ ಕಟ್ಟಿಸಿಕೊಂಡು ಬಳಿಕ ಪರೀಕ್ಷೆ ಕೇಂದ್ರಕ್ಕೆ ಹಾಜರಾಗಿರುವ ನವವಧು ಘಟನೆ ಜಿಲ್ಲೆಯ ಭರ್ಮಪ್ಪ ನಗರದಲ್ಲಿ ನಡೆದಿದೆ.

ಭರ್ಮಪ್ಪ ನಗರದ ನಿವಾಸಿ ಸತ್ಯವತಿ ಎಂಬುವವರು ಕಮಲಾ ನೆಹರು ಕಾಲೇಜಿನಲ್ಲಿ ಬಿಎ ಅಂತಿಮ ವರ್ಷದಲ್ಲಿ ಓದುತ್ತಿದ್ದರು. ಈ ವೇಳೆ ಸೋಷಿಯಲ್ ಮೀಡಿಯಾ ಮೂಲಕ ಚೆನ್ನೈ ಮೂಲದ ಫ್ರಾನ್ಸಿಸ್ ಎಂಬ ಯುವಕನ ಪರಿಚಯವಾಗಿತ್ತು. ಬಳಿಕ ಇನ್ಸ್ಟಾಗ್ರಾಂನಲ್ಲಿ ಎರಡು ವರ್ಷ ಚಾಟಿಂಗ್ ಮಾಡುತ್ತ ಇಬ್ಬರಲ್ಲೂ ಪ್ರೀತಿ ಬೆಳೆದಿತ್ತು.

ಇದನ್ನು ಓದಿ : ಇಂಡೋ-ಪಾಕ್ ಪಂದ್ಯಕ್ಕೆ ಮಳೆ ಅಡ್ಡಿ

ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಫ್ರಾನ್ಸಿಸ್. ಬಳಿಕ ಮನೆಯಲ್ಲಿ ಹಿರಿಯರಿಗೆ ತಮ್ಮ ಪ್ರೀತಿ ವಿಚಾರ ತಿಳಿಸಿ ಮನೆಯವರ ಒಪ್ಪಿಗೆ ಪಡೆದಿದ್ದರು. ಆದ್ದರಿಂದ ಇಂದು ಅವರ ವಿವಾಹವನ್ನು ನಿಶ್ಚಯ ಮಾಡಲಾಗಿತ್ತು. ಆದರೆ ಇವತ್ತೆ ಕಾಲೇಜಿನಲ್ಲಿ ಅಂತಿಮ ಬಿಎ ಪರೀಕ್ಷೆ ಇದ್ದಿದ್ದರಿಂದ, ಬೆಳಗ್ಗೆ ಮನೆಯಲ್ಲಿಯೇ ತುಂಬಾ ಸರಳವಾಗಿ ಮದುವೆ ಮಾಡಿಕೊಂಡಿದ್ದರು.

ಮಾಂಗಲ್ಯಧಾರಣೆ ಆದ ಬಳಿಕ ಸತ್ಯವತಿ ಪರೀಕ್ಷೆ ಬರೆಯಲೆಂದು ಪರೀಕ್ಷೆ ಕೇಂದ್ರಕ್ಕೆ ಹಾಜರ್ ಆದ ಸತ್ಯವತಿ. ಅಷ್ಟೇ ಅಲ್ಲ ಸತ್ಯವತಿಯನ್ನು ಸ್ವತಃ ಅವಳ ಪ್ರಿಯಕರನೆ ಕರೆದುಕೊಂಡು ಹೋಗಿ ಪರೀಕ್ಷೆ ಮುಗಿದ ಬಳಿಕ ಇಬ್ಬರು ನವವಧುಗಳು ಕಲ್ಯಾಣ ಮಂಟಪಕ್ಕೆ ವಾಪಸ್ ತೆರಳಿದರು.

RELATED ARTICLES

Related Articles

TRENDING ARTICLES