Wednesday, January 22, 2025

ವಿಚ್ಚೇದನ ಕೋರಿ ಅರ್ಜಿ; ಎರಡು ಜೋಡಿಗಳನ್ನು ಮತ್ತೆ ಒಂದು ಮಾಡಿದ ನ್ಯಾಯಾಧೀಶರು

ಕೊಪ್ಪಳ : ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆ ನ್ಯಾಯಾಧೀಶರ ಮನವೋಲಿಕೆ ಹಿನ್ನೆಲೆ ಹೊಸ ಜೀವನಕ್ಕೆ ಕಾಲಿಟ್ಟ ದಂಪತಿಗಳು ಈ ಅಪರೂಪದ ಘಟನೆ ಜಿಲ್ಲೆಯ ಗಂಗಾವತಿ ನ್ಯಾಯಾಲಯದಲ್ಲಿ ನಡೆದಿದೆ.

ಕಳೆದ ಒಂದು ವರ್ಷದ ಹಿಂದೆ ಕ್ಷುಲಕ ಕಾರಣಕ್ಕೆ ವಿಚ್ಚೇದನ ಪಡೆಯಲು ಸ್ಥಳೀಯ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದ ಎರಡು ಜೋಡಿಗಳು. ಅದರಿಂದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ ಎಂಬುವವರು ಈ ಜೋಡಿಗೆ ಬುದ್ಧಿ ಹೇಳುವುದರ ಮೂಲಕ ಇಬ್ಬರು ಜೋಡಿಗಳನ್ನು ಒಂದು ಮಾಡಿದ್ದಾರೆ.

ಇದನ್ನು ಓದಿ : ಒಂದೇ ತಿಂಗಳಲ್ಲಿ 110 kg ಚಿನ್ನ ಉತ್ಪಾದನೆ ; ದಾಖಲೆ ಸೃಷ್ಟಿಸಿದ ಹಟ್ಟಿ ಚಿನ್ನದ ಗಣಿ

ಇಬ್ಬರು ಮತ್ತೆ ಒಂದಾಗ ಬೇಕು ಎಂಬ ಉದ್ದೇಶದಿಂದ, ರಾಜೀ ಸಂಧಾನದಲ್ಲಿಅವರಿಬ್ಬರಿಗೂ ಮನಸ್ಸಿಗೆ ನಾಟುವಂತಹ ಮಾತುಗಳನ್ನು ಹೇಳಿ ಮನವೋಲಿಸಿದ ನ್ಯಾಯಾಧೀಶರು. ಬಳಿಕ ನ್ಯಾಯಾಧೀಶರ ಮಾತುಗಳಿಂದ ಬದಲಾದ ಜೋಡಿಗಳು ವಿಚ್ಛೇದನಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರೀಯ ಲೋಕ ಆದಾಲತ್​ನಲ್ಲಿ ವಿಚ್ಚೇದನ ಅರ್ಜಿ ವಾಪಸ್ ಪಡೆದಿದ್ದು, ನ್ಯಾಯಾಲಯದ ದೇಗುಲದ ಎದುರಿನಲ್ಲೇ ಎರಡು ಜೋಡಿಗಳು ಪರಸ್ಪರ ಹಾರ ಬದಲಿಸಿ ಸಿಹಿ ಹಂಚಿ ನಗುತ್ತ ನ್ಯಾಯಾಲಯದಿಂದ ಹೊರ ನಡೆದ ದಂಪತಿಗಳು.

ಮನವೋಲಿಕೆ ಸಂದರ್ಭದಲ್ಲಿ ರಮೇಶ್ ಗಾಣಿಗೇರ, ಶ್ರೀದೇವಿ ದರಬಾರೆ ಹಾಗೂ ಗೌರಮ್ಮ ಪಾಟೀಲ್ ಎಂಬುವವರು ನ್ಯಾಯಾಧೀಶರಿಗೆ ರಾಜೀ ಸಂಧಾನದಲ್ಲಿ ಸಾತ್ ನೀಡಿದ್ದರು. ದಂಪತಿಗಳು ಮತ್ತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದನ್ನು ಕಂಡು, ಈ  ಅಪರೂಪದ ಕಾರ್ಯವನ್ನು ಮೆಚ್ಚಿ ನ್ಯಾಯಾಧೀಶರಿಗೆ ವಕೀಲರ ಸಂಘ ಅಭಿನಂದನೆ ತಿಳಿಸಿದರು.

RELATED ARTICLES

Related Articles

TRENDING ARTICLES