Monday, December 23, 2024

ಬಸವಣ್ಣನ ವಿಚಾರಧಾರೆಯ ಪ್ರಚಾರಕ ಶ್ರೀಗಳಿಗೆ ಮತ್ತೆ ಜೀವ ಬೆದರಿಕೆ

ಬೆಳಗಾವಿ  : ಬಸವಣ್ಣನವರ ವಿಚಾರಧಾರೆಯ ಪ್ರಚಾರಕರಾದ ಶ್ರೀಗಳಿಗೆ ಮತ್ತೆ ಜೀವ ಬೆದರಿಕೆ ಹಾಕಿರುವ ದುಷ್ಕರ್ಮಿಗಳು ಘಟನೆ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪದಲ್ಲಿ ನಡೆದಿದೆ.

ತಮ್ಮ ಖಡಕ್ ಮಾತುಗಳಿಂದಲೇ ರಾಜ್ಯದಲ್ಲಿ ಖ್ಯಾತಿಗಳಿಸಿರುವ ನಿಜಗುಣಾನಂದ ಶ್ರೀಗಳಿಗೆ ಈ ಹಿಂದೆ 2020ರಲ್ಲಿ ಅವರನ್ನು ಹತ್ಯೆ ಮಾಡುವುದಾಗಿ ಜೀವ ಬೆದರಿಕೆ ಪತ್ರ ಬಂದಿತ್ತು. ಈಗ ಮತ್ತೆ ನಿಷ್ಕಲ ಮಠಕ್ಕೆ ಪೋಸ್ಟ್ ಮೂಲಕ ಬಂದಿರೋ ಜೀವ ಬೆದರಿಕೆ ಪತ್ರ.

ಆ ಬೆದರಿಕೆ ಪತ್ರದಲ್ಲಿ 2020ರಲ್ಲಿ ನಿನ್ನ ಹತ್ಯೆ ತಪ್ಪಿರಬಹುದು, ಆದರೆ 2023ರಲ್ಲಿ ತಪ್ಪಲ್ಲ. ನಿನ್ನ ಪಾಪದ ಕೊಡ ತುಂಬಿದೆ ಆದಷ್ಟು ಬೇಗ ನಿನ್ನ ತಿಥಿ ಮಾಡುತ್ತೇವೆ, ನಿನ್ನ ಭಕ್ತರಿಗೆ ಹೇಳು. ಅಷ್ಟೇ ಅಲ್ಲ ನಮ್ಮ ಧರ್ಮದ ದೇವತೆಗಳನ್ನು ನಿಂದಿಸುವ ನಿನಗೆ ಘೋರ ಹತ್ಯೆಯೆ ಬರುತ್ತದೆ. ನಿನ್ನ ಅಂತಿಮ ದಿನಗಳು ಆರಂಭವಾಗಿದೆ, ಇನ್ನು ದಿನಗಳನ್ನು ಎಣಿಸು ಎಂದು ಬೆದರಿಕೆ ಹಾಕಿ ಮಠಕ್ಕೆ ಪೋಸ್ಟ್ ಮೂಲಕ ಪತ್ರ ಕಳುಹಿಸಿರುವ ಕಿಡಿಗೇಡಿಗಳು.

ಇದನ್ನು ಓದಿ : ಹಸೆಮಣೆ ಏರಿ ಪರೀಕ್ಷೆಗೆ ಹಾಜರಾದ ನವವಧು

ಇದರಿಂದ ಆತಂಕಗೊಂಡಿದ್ದು ಈ ವರೆಗೂ ಸ್ವಾಮೀಜಿಗೆ ಐದಕ್ಕೂ ಅಧಿಕ ಬಾರಿ ಜೀವ ಬೆದರಿಕೆ ಪತ್ರ ಬರೆದಿರುವ ದುಷ್ಕರ್ಮಿಗಳು. ಹಲವು ದಿನಗಳ ಹಿಂದೆಯೆ ಜೀವ ಬೆದರಿಕೆ ಪತ್ರ ಬಂದಿರುವ ಹಿನ್ನೆಲೆ ದೂರು ದಾಖಲಿಸಲಾಗಿತ್ತು. ಆದರೂ ಸಹ ತಲೆಕೆಡಿಸಿಕೊಳ್ಳದ ಪೋಲಿಸರು. ಈಗ ಮತ್ತೆ ಬೆದರಿಕೆ ಪತ್ರ ಬಂದಿದ್ದರಿಂದ ಪುನಾಹ ದೂರು ಕೊಟ್ಟರೆ, ದೂರು ದಾಖಲಿಸಿಕೊಳ್ಳದೇ ನಿರ್ಲಕ್ಷ್ಯ ತೋರುತ್ತಿರುವ ಕಿತ್ತೂರು ಪೊಲೀಸರು

RELATED ARTICLES

Related Articles

TRENDING ARTICLES