Thursday, January 23, 2025

ಇಂಡೋ-ಪಾಕ್ ಪಂದ್ಯಕ್ಕೆ ಮಳೆ ಅಡ್ಡಿ

ಬೆಂಗಳೂರು : ಭಾರತ ಹಾಗೂ ಪಾಕಿಸ್ತಾನ ನಡುವೆ ಏಷ್ಯಾಕಪ್ ಸೂಪರ್-4 ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.

ಮಳೆಯಿಂದಾಗಿ ಅಂಪೈರ್​ಗಳು ಪಂದ್ಯವನ್ನು ನಿಲ್ಲಿಸಿದರು. ಸದ್ಯ ಭಾರತ ತಂಡ 24.1 ಓವರ್​ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 147 ರನ್​ ಗಳಿಸಿದೆ. ವಿರಾಟ್ ಕೊಹ್ಲಿ 8(16) ಹಾಗೂ ಕೆ.ಎಲ್ ರಾಹುಲ್17(28) ರನ್​ ಗಳಿಸಿ ಕ್ರೀಸ್​ನಲ್ಲಿದ್ದಾರೆ.

ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಪಂದ್ಯ ಆರಂಭಕ್ಕೂ ಮುನ್ನ ಮಳೆ ಮುನ್ಸೂಚನೆ ಇತ್ತು. ಶ್ರೀಲಂಕಾದ ರಾಜಧಾನಿಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಮಳೆಯ ಮನ್ಸೂಚನೆಯನ್ನು ಗಮನಿಸಿರುವ ಎಸಿಸಿ, ಈ ಉಭಯ ತಂಡಗಳ ಕಾಳಗಕ್ಕೆ ಮೀಸಲು ದಿನವನ್ನು ನಿಗದಿಪಡಿಸಿದೆ.

RELATED ARTICLES

Related Articles

TRENDING ARTICLES