Wednesday, January 22, 2025

ಒಂದೇ ತಿಂಗಳಲ್ಲಿ 110 kg ಚಿನ್ನ ಉತ್ಪಾದನೆ ; ದಾಖಲೆ ಸೃಷ್ಟಿಸಿದ ಹಟ್ಟಿ ಚಿನ್ನದ ಗಣಿ

ರಾಯಚೂರು : ಆಗಸ್ಟ್ ತಿಂಗಳೊಂದರಲ್ಲಿ 100 ಕೆ.ಜಿ. ಚಿನ್ನಕ್ಕಿಂತ ಹೆಚ್ಚು ಉತ್ಪಾದನೆ ಮೂಲಕ ದಾಖಲೆ ಮಾಡಿರುವ ಕಂಪನಿ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದ ಕಂಪನಿಯಲ್ಲಿ ನಡೆದಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ 1.800 ಕೆ.ಜಿ. ಚಿನ್ನ ಉತ್ಪಾದನೆಯ ಗುರಿಯನ್ನು ಹೊಂದಲಾಗಿದೆ. ಆದರೆ 5 ತಿಂಗಳಲ್ಲಿ 501.865 ಕೆ.ಜಿ. ಚಿನ್ನ ಉತ್ಪಾದಿಸಲಾಗಿದೆ. ಏಪ್ರಿಲ್​ ತಿಂಗಳಲ್ಲಿ 98 ಕೆ.ಜಿ, ಮೇ ತಿಂಗಳಲ್ಲಿ 94 ಕೆ.ಜಿ, ಜೂನ್ ತಿಂಗಳಲ್ಲಿ 98 ಕೆ.ಜಿ. ಹಾಗೂ ಜುಲೈ ತಿಂಗಳಲ್ಲಿ 99 ಕೆ.ಜಿ ಚಿನ್ನವನ್ನು ಉತ್ಪಾದಿಸಲಾಗಿತ್ತು.

ಆದರೆ ಆಗಸ್ಟ್ ತಿಂಗಳಲ್ಲಿ ಈ ಎಲ್ಲಾ ತಿಂಗಳಲ್ಲಿ ಆಗಿರುವುದಕ್ಕಿಂತ 48,914 ಮೆಟ್ರಿಕ್ ಟನ್ ಅದಿರು ಸಂಸ್ಕರಣೆ ಮಾಡಿ 110,600 ಕೆ.ಜಿ. ಚಿನ್ನವನ್ನು ಉತ್ಪಾದಿಸುವ ಮೂಲಕ ವಿಶೇಷ ಸಾಧನೆಯನ್ನು ಮೆರೆದಿದ್ದಾರೆ.

ಇದನ್ನು ಓದಿ : ಇಂದಿನಿಂದ ಪಂಚಮಸಾಲಿ ಸಮುದಾಯ ಹೋರಾಟ!

ಏಪ್ರಿಲ್​ನಿಂದ ಜುಲೈವರೆಗೆ ಮಾಸಿಕ ಸರಾಸರಿ ಚಿನ್ನ ಉತ್ಪಾದನೆ 100 ಕೆ.ಜಿ. ಕೂಡ ದಾಟಿರಲಿಲ್ಲ, ಆದರೆ 100 ಕೆ.ಜಿ. ಗಿಂತ ಹೆಚ್ಚು ಚಿನ್ನ ಉತ್ಪಾದನೆಯನ್ನು ಮಾಡಿ ರಾಷ್ಟ್ರದ ಏಕೈಕ ಹಟ್ಟಿ ಚಿನ್ನದ ಗಣಿಯೆಂದು ದಾಖಲೆಯನ್ನು ಮಾಡಿರುವುದು ಹೆಮ್ಮೆಯ ವಿಷಯವಾಗಿದೆ.

RELATED ARTICLES

Related Articles

TRENDING ARTICLES