Sunday, December 8, 2024

ಮಂಗಳೂರು: ಡಾ.ಶಂಸುಲ್​ ಇಸ್ಲಾಂ ಉಪನ್ಯಾಸಕ್ಕೆ ಎಬಿವಿಪಿ ತೀವ್ರ ವಿರೋಧ!

ಮಂಗಳೂರು : ಮಂಗಳೂರು ವಿವಿ ಕಾಲೇಜು ಉಪನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಿದ ಡಾ.ಶಂಸುಲ್‌ ಇಸ್ಲಾಂ ಅವರ ಉಪನ್ಯಾಸಕ್ಕೆ ಎಬಿವಿಪಿ ಸಂಘಟನೆ ಭಾರಿ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

ಇಲ್ಲಿನ ಹಂಪನಕಟ್ಟೆ ಬಳಿಯ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬಿ.ವಿ.ಕಕ್ಕಿಲ್ಲಾಯ ಪ್ರತಿಷ್ಠಾನದಿಂದ ದೆಹಲಿ ವಿವಿ ನಿವೃತ್ತ ಪ್ರೊಫೆಸರ್ ಡಾ.ಶಂಸುಲ್‌ ಇಸ್ಲಾಂ ಉಪನ್ಯಾಸಕ್ಕೆ ಆಗಮಿಸಿದ್ದರು. ಈ ವೇಳೆ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಮತ್ತು ಎಬಿವಿಪಿ ಸಂಘಟನೆಯೂ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ಸೆ.11ಕ್ಕೆ ಬೆಂಗಳೂರು ಬಂದ್!

ಡಾ.ಶಂಸುಲ್ ಇಸ್ಲಾಂ ಕಾರ್ಯಕ್ರಮದಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ 1857 – ಜಂಟಿ ಬಲಿದಾನಗಳು, ಜಂಟಿ ವಾರಿಸುದಾರಿಕೆ ಕುರಿತು ಉಪನ್ಯಾಸ ಮಾಡಲು ಆಗಮಿಸಿದ್ದರು, ಈ ಕಾರ್ಯಕ್ರಮಕ್ಕೆ ಎಬಿವಿಪಿ ವಿರೋಧ ವ್ಯಕ್ತಪಡಿಸಿತ್ತು,  ವಿರೋಧದ ನಡುವೆಯೂ ಬಿ.ವಿ ಕಕ್ಕಿಲ್ಲಾಯ ಪ್ರತಿಷ್ಠಾನದಿಂದ ಕಾರ್ಯಕ್ರಮ ಆಯೊಜನೆ ಮಾಡಿದ್ದಕ್ಕಾಗಿ ಸಂಘಟನೆಯೂ ಆಕ್ಷೇಪ ವ್ಯಕ್ತಪಡಿಸಿ ವಿವಾದಾತ್ಮಕ ವ್ಯಕ್ತಿಗಳನ್ನು ಕಾರ್ಯಕ್ರಮಕ್ಕೆ ಕರೆಸಿ ಕಾಲೇಜಿನಲ್ಲಿ ಸಂಘರ್ಷ ವಾತಾವರಣ ಸೃಷ್ಠಿಗೆ ಸಂಚು ಆರೋಪ ಮಾಡಿ ಪ್ರತಿಭಟನೆ ನಡೆಸಿದೆ.

ಸದ್ಯ ಘಟನಾ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿದ್ದು ಪೊಲೀಸರು ವಿದ್ಯಾರ್ಥಿಗಳನ್ನು ಹಾಗು ಸಂಘಟನಾಕಾರರನ್ನು ಹತೋಟಿಗೆ ತರಲು ಹರಸಾಹಸ ಪಡುವಂತಾಗಿದೆ.

RELATED ARTICLES

Related Articles

TRENDING ARTICLES