Monday, December 23, 2024

ಅಪ್ರಾಪ್ತನಿಗೆ ಬೈಕ್ ಓಡಿಸಲು ಕೊಟ್ಟಿದ್ದ ತಂದೆ ; ದಂಡ ವಿಧಿಸಿದ ನ್ಯಾಯಾಲಯ

ಶಿವಮೊಗ್ಗ : ಅಪ್ರಾಪ್ತ ಬಾಲಕನಿಗೆ ಬೈಕ್ ಓಡಿಸಲು ಕೊಟ್ಟವರಿಗೆ 25 ಸಾವಿರ ದಂಡ ವಿಧಿಸಿದ ನಗರದ 4ನೇ ಎ ಸಿ ಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ.

ನಗರದ ಕ್ಲಾರ್ಕ್​ ಪೇಟೆ ನಿವಾಸಿಯಾಗಿರುವ ಓಂಪ್ರಕಾಶ್ (47) ಎಂಬುವವರು ತಮ್ಮ 17 ವರ್ಷದ ಮಗನಿಗೆ ದ್ವಿಚಕ್ರ ವಾಹನಾ ಚಾಲನೆ ಮಾಡಲು ಅವಕಾಶ ನೀಡಿದ್ದರು. ಬಳಿಕ ಬಾಲಕ ವಾಹನ ಚಾಲನಾ ಪರವಾನಿಗೆ ಇಲ್ಲದೆ ಬೈಕ್ ಚಲಾಯಿಸುತ್ತಿದ್ದನು. ಈ ವೇಳೆ ಅಶೋಕ ಹೋಟೆಲ್ ಬಳಿ ವಾಹನ ತಪಾಸಣೆ ಮಾಡುವಾಗ ಬಾಲಕನನ್ನು ತಡೆದಿದ್ದ ಸಂಚಾರಿ ಪೋಲಿಸರು.

ಇದನ್ನು ಓದಿ : ಇನ್ಮುಂದೆ ದೇವಾಲಯದ ಸುತ್ತ ಗುಟ್ಕಾ ಸಿಗರೇಟ್​ ನಿಷೇಧ : ಸಚಿವ ರಾಮಲಿಂಗಾರೆಡ್ಡಿ

ಬಳಿಕ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದರಿಂದ, ಅಪ್ರಾಪ್ತ ಬಾಲಕನ ಮೇಲೆ ಕೇಸು ದಾಖಲಿಸಿಕೊಂಡ ನಗರದ ಪಶ್ಚಿಮ ಸಂಚಾರಿ ಪೋಲಿಸರು. ಈ ಘಟನೆ ಹಿನ್ನೆಲೆ ಬಾಲಕನ ತಂದೆ ಓಂ ಪ್ರಕಾಶ್ ಅವರಿಗೆ 25 ಸಾವಿರ ರೂ. ದಂಡ ವಿಧಿಸಿದ 4ನೇ ಎ ಸಿ ಜೆ & ಜೆ ಎಂ ಎಫ್ ಸಿ ನ್ಯಾಯಾಲಯ.

ಇನ್ನೂ ಮುಂದೆ ಅಪ್ರಾಪ್ತ ಬಾಲಕರಿಗೆ ವಾಹನ ಓಡಿಸಲು ಕೊಟ್ಟಿದ್ದಲ್ಲಿ ಅವರಿಗೆ 25 ಸಾವಿರ ದಂಡ ವಿಧಿಸುವುದಾಗಿ ಎಚ್ಚರಿಕೆಯನ್ನು ನೀಡಿದೆ.

RELATED ARTICLES

Related Articles

TRENDING ARTICLES