Thursday, December 26, 2024

ಜಾತಿ ತಾರತಮ್ಯ ಇರೋವರೆಗೂ ಮೀಸಲಾತಿ ಬೇಕು : ಮೋಹನ್​ ಭಾಗವತ್​

ನಾಗಪುರ:  ಸಮಾಜದಲ್ಲಿ ಈಗಲೂ ಜಾತಿ-ವರ್ಗಗಳ ತಾರತಮ್ಯ ಇದೆ. ಅದು ಅಸ್ತಿತ್ವದಲ್ಲಿ ಇರುವವರೆಗೂ ಮೀಸಲಾತಿ ವ್ಯವಸ್ಥೆ ಕೂಡ ಮುಂದುವರಿಯಬೇಕು. ಸಂವಿಧಾನದಲ್ಲಿ ನೀಡಿರುವ ಮೀಸಲಾತಿಗಳಿಗೆ RSS ಸಂಪೂರ್ಣ ಬೆಂಬಲ ನೀಡುತ್ತದೆ,” ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ ನೋಂದಣಿ ಪ್ರಕ್ರಿಯೆ ಸ್ಥಗಿತ ಇಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​

ನಾಗ್ಪುರದಲ್ಲಿ ಮಾತನಾಡಿದ ಅವರು, ”ನಾವು ನಮ್ಮದೇ ಸಮಾಜದ ಕೆಲ ವರ್ಗಗಳ ಏಳಿಗೆ ಬಗ್ಗೆ ಕಾಳಜಿ ವಹಿಸಲಿಲ್ಲ. ಅವರನ್ನು ಸಾಮಾಜಿಕ ವ್ಯವಸ್ಥೆಯಲ್ಲಿ ಹಿಂದೆಯೇ ಇರಿಸಿದ್ದೆವು. ಸುಮಾರು 2 ಸಾವಿರ ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ.

ಶೋಷಿತರ ಏಳಿಗೆಗೆ ಸಮಾನತೆಯ ಧ್ವನಿ ಎತ್ತುವುದು, ಕೆಲವು ವಿಶೇಷ ಪರಿಹಾರಗಳ ಅಗತ್ಯವಿದೆ. ಅದರಲ್ಲಿ ಸಂವಿಧಾನದತ್ತ ಮೀಸಲು ನೀತಿಯೂ ಒಂದಾಗಿದೆ. ಹೀಗಾಗಿ ಸಮಾಜದಲ್ಲಿ ಜಾತಿ- ವರ್ಗಗಳ ತಾರತಮ್ಯ ಇರುವವರೆಗೂ, ಅವರಿಗೆ ನಾವು ಸಮಾನತೆ ಒದಗಿಸುವವರೆಗೂ ಮೀಸಲು ನೀತಿ ಇರಬೇಕು ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES