Monday, December 23, 2024

ಖ್ಯಾತ ವ್ಯಂಗ್ಯ ಚಿತ್ರಕಾರ ಅಜಿತ್ ನಿನನ್ ಇನ್ನಿಲ್ಲ

ಮೈಸೂರು : ಅತ್ಯುತ್ತಮ ವ್ಯಂಗ್ಯಚಿತ್ರಗಳಿಂದ ವಿಶ್ವ ಮನ್ನಣೆ ಗಳಿಸಿದ್ದ ಖ್ಯಾತ ರಾಜಕೀಯ ವ್ಯಂಗ್ಯ ಚಿತ್ರಕಾರ ಅಜಿತ್ ನಿನನ್ ನಿಧನರಾಗಿದ್ದಾರೆ.

ಹೃದಯ ಸ್ತಂಭನದಿಂದ ಮೈಸೂರಿನಲ್ಲಿ ಇಂದು ನಿಧನರಾಗಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ನಿನನ್ ಪತ್ನಿ, ಇಬ್ಬರು ಪುತ್ರಿಯರು ಮತ್ತು ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಕಳೆದ ಎರಡು ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿದ್ದ ನಿನಾನ್ ಮನೆಯಲ್ಲಿ ಒಬ್ಬರೆ ಇದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಪತ್ನಿ ಗೋವಾದಲ್ಲಿರುವ ತಮ್ಮ ಮಗಳ ಮನೆಗೆ ಹೋಗಿದ್ದರು. ಇವರು ಖ್ಯಾತ ವ್ಯಂಗ್ಯಚಿತ್ರಕಾರ ಅಬು ಅಬ್ರಹಾಂ ಅವರ ಸೋದರಳಿಯ.

ಸುದ್ದಿ ಓದಿದ್ದೀರಾ? : ಶವಯಾತ್ರೆಗೆ ಹೆಗಲು ಕೊಟ್ಟ ಇನ್​ಸ್ಪೆಕ್ಟರ್ ಶಬ್ಬೀರ್

ಬಾರ್ಟನ್ ಪ್ರಶಸ್ತಿ ಪುರಸ್ಕೃತರು

ಅಜಿತ್ ನಿನನ್ ಅವರು ಶಾಲೆಯಲ್ಲಿದ್ದಾಗ 1960ರ ದಶಕದಲ್ಲಿ ಅವರ ಮೊದಲ ಕಾರ್ಟೂನ್ ಪ್ರಕಟಿಸಿದ್ದರು. ಬಳಿಕ, ಟೈಮ್ಸ್ ಆಫ್ ಇಂಡಿಯಾದ ‘ನಿನಾನ್ಸ್ ವರ್ಲ್ಡ್’ ಕಾರ್ಟೂನ್ ಸರಣಿ, ‘ಇಂಡಿಯಾ ಟುಡೆ’ ನಿಯತಕಾಲಿಕೆಯಲ್ಲಿ ‘ಸೆಂಟರ್ ಸ್ಟೇಜ್‌’ ಮೂಲಕ ಪ್ರಖ್ಯಾತಿ ಗಳಿಸಿದ್ದರು. ಇವರಿಗೆ ಬಾರ್ಟನ್ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿ ಸಂದಿವೆ.

RELATED ARTICLES

Related Articles

TRENDING ARTICLES