Sunday, November 3, 2024

ನೆಟೆ ರೋಗ ಸಂತ್ರಸ್ತರಿಗೆ ಪರಿಹಾರ ಹಣ ಬಿಡುಗಡೆ!

ಬೆಂಗಳೂರು:  ಉತ್ತರ ಕರ್ನಾಟಕದ ಕಲಬುರಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನೆಟೆ  ರೋಗದಿಂದ ಕಳೆದ  ಸಾಲಿನಲ್ಲಿ ತೊಗರಿ ಬೆಳೆ ಹಾನಿಯಿಂದ ನಷ್ಟ ಅನುಭವಿಸಿದ್ದ ರೈತರಿಗೆ   ಬಾಕಿ ಇದ್ದ ಪರಿಹಾರ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರ ಮನವಿ ಮೇರೆಗೆ  ನೆಟೆ ರೋಗ ಸಂತ್ರಸ್ತರಿಗೆ ಬಾಕಿ ಇದ್ದ 223 ಕೋಟಿ ರೂ ಗಳನ್ನು ಸರ್ಕಾರ ಮಂಜೂರು ಮಾಡಿ 74 ಕೊಟಿ ರೂಗಳನ್ನು ಬಿಡುಗಡೆ ಮಾಡಿತ್ತು.
ಪ್ರಸ್ತುತ 2ನೇ ಕಂತಿನಲ್ಲಿ 74 ಕೋಟಿ ಹಣ ಬಿಡುಗಡೆಗೊಳಿಸಲಾಗಿದೆ. ಬಾಕಿ ಉಳಿದ ರೂ 75 ಕೋಟಿ ಹಣವನ್ನು ಸಹ ಶೀಘ್ರವಾಗಿ ಬಿಡುಗಡೆ ಮಾಡಲಾಗುವುದು.

ಇದನ್ನೂ ಓದಿ: ಬಿಜೆಪಿಗರು ಜನರಿಂದ ತಿರಸ್ಕಾರಗೊಂಡಿದ್ದಾರೆ : ಸಚಿವ ಎಂಬಿ ಪಾಟೀಲ್​

ಇದಕ್ಕಾಗಿ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರಿಗೆ ಧನ್ಯವಾದ ತಿಳಿಸಿದ್ದು ನಮ್ಮ ಸರ್ಕಾರ  ರೈತರ ನೆರವಿಗೆ ಸದಾ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES