Thursday, November 21, 2024

ಶಾಲಾ ಸಮವಸ್ತ್ರ ಪೂರೈಕೆಯಲ್ಲಿ ಅಕ್ರಮ: ಆರೋಪಿಗಳ ವಿರುದ್ದ ಕ್ರಮಕ್ಕೆ ಸೂಚನೆ: ಹೆಚ್​.ಕೆ ಪಾಟೀಲ್​

ಬೆಂಗಳೂರು : ಸರ್ಕಾರಿ ಶಾಲಾ ಮಕ್ಕಳ ಸಮವಸ್ತ್ರಕ್ಕೆ ಕಳಪೆ ಬಟ್ಟೆ ಪೂರೈಕೆ ಮತ್ತು ಅದಕ್ಕೆ ₹117 ಕೋಟಿ ಹಣ ಪಾವತಿಸಿರುವ ಪ್ರಕರಣದ ಬಗ್ಗೆ ಇಲಾಖೆ ತನಿಖೆ ನಡೆಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಪ್ರವಾಸೋದ್ಯಮ ಹಾಗು ಸಂಸದೀಯ ವ್ಯವಹಾರಗಳ ಸಚಿವ ಹೆಚ್​.ಕೆ ಪಾಟೀಲ್​ ತಿಳಿಸಿದರು.

ನಗರದದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಪೂರೈಕೆ ಮಾಡಿದ ಸಮವಸ್ತ್ರದ ಬಟ್ಟೆ ಶೇ 90 ರಷ್ಟು ಕಳಪೆ ಗುಣಮಟ್ಟದ್ದಾಗಿದೆ, ಬಟ್ಟೆಗಳಿಗೆ ನೀಡಬೇಕಾಗಿದ್ದ ಹಣವನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಗಿದೆ. ಆದರೂ, ಕಳಪೆ ಬಟ್ಟೆ ಪೂರೈಕೆಗೆ ಯಾರು ಕಾರಣ ಎಂಬುದನ್ನು ಪತ್ತೆ ಮಾಡಿ ಬಟ್ಟೆ ಸಪ್ಲೈ ಮಾಡಿದವರು ಹಾಗು ಅದನ್ನು ಖರೀದಿ ಮಾಡಿರವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದರು.

ಇದನ್ನೂ ಓದಿ: ಇನ್ಮುಂದೆ ದೇವಾಲಯದ ಸುತ್ತ ಗುಟ್ಕಾ ಸಿಗರೇಟ್​ ನಿಷೇಧ : ಸಚಿವ ರಾಮಲಿಂಗಾರೆಡ್ಡಿ

2022–23ನೇ ಸಾಲಿಗೆ ಉತ್ತಮ ಗುಣಮಟ್ಟದ ಬಟ್ಟೆ ಪೂರೈಕೆ ಮಾಡಿದ ಸಮವಸ್ತ್ರಗಳ ಬಟ್ಟೆಗೆ ಮಾತ್ರ KHDC ಸಂಸ್ಥೆಗೆ ಪಾವತಿಸಬೇಕಾಗಿರುವ ಬಾಕಿ ಮೊತ್ತ ₹14.48 ಕೋಟಿ ಬಿಡುಗಡೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. 2023–24ನೇ ಸಾಲಿಗೆ ಎರಡನೇ ಜೊತೆ ಕಳಪೆ ಗುಣಮಟ್ಟದ ಬಟ್ಟೆ ಪೂರೈಸಿದ್ದಕ್ಕಾಗಿ ವಿಳಂಬ, ದಂಡ ಮತ್ತು ಶಿಕ್ಷಣ ಇಲಾಖೆ ತಡೆ ಹಿಡಿದಿದ್ದ ₹2.43 ಕೋಟಿಯನ್ನು ನೇಕಾರರ ಹಿತದೃಷ್ಟಿಯಿಂದ ಬಿಡುಗಡೆ ಮಾಡಲು ತೀರ್ಮಾನಿಸಲಾಯಿತು ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES