Wednesday, January 22, 2025

ಹಿಟ್ಅಂಡ್ ರನ್ ಕೇಸ್ ; ಆಸ್ಪತ್ರೆಗೆ ಭೇಟಿ ಕೊಟ್ಟ ನಟ ಚಂದ್ರಪ್ರಭ

ಹಾಸನ : ಚಿಕ್ಕಮಂಗಳೂರಲ್ಲಿ ಚಂದ್ರಪ್ರಭ ಅವರ ಹಿಟ್ಅಂಡ್ ರನ್ ಕೇಸ್ ಹಿನ್ನೆಲೆ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಗಿಚ್ಚಿಗಿಲಿಗಿಲಿ ಖ್ಯಾತಿಯ ನಟ ಚಂದ್ರಪ್ರಭ ಅವರು ಸೋಮವಾರ ಚಿಕ್ಕಮಂಗಳೂರಿನಲ್ಲಿ ಬೈಕ್​ನಲ್ಲಿ ತೆರಳುತ್ತಿದ್ದ, ಮಾಲ್ತೇಶ್ ಎಂಬುವವರಿಗೆ ಚಂದ್ರಪ್ರಭ ಅವರ ಕಾರು ಡಿಕ್ಕಿ ಹೊಡೆದಿತ್ತು. ಆದರೂ ಸಹ ಮಾನಮವೀಯತೆ ಮರೆತು ಕಾರು ಡಿಕ್ಕಿಯಾದರೂ ಕಾರು ನಿಲ್ಲಿಸದೇ ಹಾಗೇ ಹೋಗಿದ್ದರು.

ಈ ಘಟನಾ ಪರಿಣಾಮ ಅಪಘಾತಕ್ಕೆ ಒಳಗಾದ ಮಾಲ್ತೇಶ್ ಕಳೆದ ಮೂರು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮಾಲ್ತೇಶ್.

ಇದನ್ನು ಓದಿ : BJP-JDS ಮೈತ್ರಿ ನಾಯಿಗೆ ಹೋಲಿಸಿದ ದಿನೇಶ್ ಗುಂಡೂರಾವ್

ಈ ಘಟನೆ ಸಂಬಂಧ ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ ಇಂದು ಹಾಸನ ನಗರದ ಸ್ಪರ್ಶ್​ ಆಸ್ಪತ್ರೆಗೆ ಭೇಟಿ ನೀಡಿದ ನಟ ಚಂದ್ರಪ್ರಭ. ಬಳಿಕ ಮಾಲ್ತೇಶ್ ಅವರ ಆರೋಗ್ಯ ವಿಚಾರಿಸಿ, ಕುಟುಂಬಸ್ಥರಿಗೆ ಧೈರ್ಯ ಹೇಳಿದ ಗಿಚ್ಚಿಗಿಲಿಗಿಲಿ ಖ್ಯಾತಿಯ ನಟ ಚಂದ್ರಪ್ರಭ.

RELATED ARTICLES

Related Articles

TRENDING ARTICLES