ಬೆಂಗಳೂರು: ಶಾಲಾ ಕಾಲೇಜುಗಳ ಸುತ್ತ 100 ಮೀಟರ್ಗಳಲ್ಲಿ ಅಳತೆಯಲ್ಲಿ ಗುಟ್ಕಾ ಸಿಗರೇಟ್ ಮತ್ತು ಧೂಮಪಾನ ನಿಷೇಧಿಸಿದ ರೀತಿಯಲ್ಲೆ ಇನ್ಮುಂದೆ ದೆವಾಲಯಗಳ ಸುತ್ತ ನಿಷೇಧ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ದೇವಾಲಯಗಳ ಸ್ವಚ್ಛತೆಗೆ ಆದ್ಯತೆ ನಿಡಲು ತೀರ್ಮಾನಿಸಿದ್ದು ದೇವಾಲಯಗಳ 100 ಮೀ ಅಂತರದಲ್ಲಿ ಗುಟ್ಕಾ, ಸಿಗರೇಟ್ ಮಾರಾಟಕ್ಕೆ ಇನ್ಮುಂದೆ ನಿಷೇಧ ಏರಲಾಗುವುದು, ಇಷ್ಟು ದಿನ ಶಾಲೆಗಳ ವ್ಯಾಪ್ತಿಯಲ್ಲಿ ಮಾತ್ರ ಗುಟ್ಕಾ ಸಿಗರೇಟ್ ಮಾರಾಟ ಬ್ಯಾನ್ ಆಗಿತ್ತು
ಇದೇ ನಿಯಮವನ್ನ ಇನ್ಮೇಲೇ ಮುಜರಾಯಿ ಇಲಾಖೆ ದೇವಾಲಯಗಳಿಗೂ ವಿಸ್ತರಿಸುವ ಯೋಜನೆ ಸಿದ್ದಪಡಿಸಲಾಗಿದೆ.
ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಸ್ವಚ್ಛತೆಯನ್ನ ಕಾಪಾಡುವ ನಿಟ್ಟಿನಲ್ಲಿ ಈ ಯೋಜನೆ ಜಾರಿಯಾಗಲಿದೆ. ಈ ಕುರಿತು ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳಿಂದ ಮೌಖಿಕ ಮನವಿಗಳು ಬಂದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ದೇವಸ್ಥಾನದ ಅಕ್ಕಪಕ್ಕದ ಅಂಗಡಿಗಳಿಗೆ ಎಚ್ಚರಿಕೆ ನೀಡಲು ಈಗಾಗಲೇ ಇಲಾಖೆ ಸೂಚನೆ ನೀಡಲಾಗಿದೆ ಇದರ ಜೊತೆಗೆ ದೇವಸ್ಥಾನಗಳಲ್ಲಿ ಸಣ್ಣ ಮಕ್ಕಳಿಗೆ ಹಾಲುಣಿಸುವ ಕೊಠಡಿ ಸ್ಥಾಪನೆಗೆ ಮುಜರಾಯಿ ಇಲಾಖೆ ಪ್ಲಾನ್ ಯೋಜನೆಯನ್ನು ಸಿದ್ದಪಡಿಸಿದೆ ಎಂದು ಅವರು ಹೇಳಿದರು.