Saturday, November 2, 2024

ಬಿಜೆಪಿಗರು ಜನರಿಂದ ತಿರಸ್ಕಾರಗೊಂಡಿದ್ದಾರೆ : ಸಚಿವ ಎಂಬಿ ಪಾಟೀಲ್​

ಬೆಂಗಳೂರು: ಬಿಜೆಪಿ ರಾಜ್ಯದ ಜನತೆಯಿಂದ ತಿರಸ್ಕಾರವಾಗಿದೆ, ಆಡಳಿತ ಸರ್ಕಾರವನ್ನು ಟೀಕಿಸಲು ಯಾವುದೇ ಅಸ್ತ್ರಗಳಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ದ ಸಚಿವ ಎಂಬಿ ಪಾಟೀಲ್​ ಕಿಡಿಕಾರಿದರು.

ಬೆಂಗಳೂರಿನ ಸದಾಶಿವನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಬಳಿ ಯಾವುದೇ ಅಸ್ತ್ರಗಳಿಲ್ಲ, ಇಲ್ಲಿಯವರೆಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗಿಲ್ಲ ಎಂದು ಟೀಕಿಸಿದರು. ಬಿಜೆಪಿ ಜನರಿಂದ ತಿರಸ್ಕಾರಗೊಂಡಿದೆ. ರಾಜ್ಯದ ಜನತೆ 135 ಸೀಟ್ ಗಳನ್ನು ಕಾಂಗ್ರೆಸ್ಸಿಗೆ ನೀಡಿ ಸುಭದ್ರ ಸರ್ಕಾರ‌ ಕೊಟ್ಟಿದ್ದಾರೆ.

ಇಲ್ಲಿಯವರೆಗೂ ಬಿಜೆಪಿ ಪಕ್ಷ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಬಿಜೆಪಿ ಶಾಸಕರು, ಮುಖಂಡರು, ಕಾರ್ಯಕರ್ತರು ಪಕ್ಷ ತ್ಯಜಿಸುತ್ತಿದ್ದಾರೆ. ಅವರದ್ದು‌ ಮುಳುಗಿರುವ ದೋಣಿ ಎಂದರು.

ಇದನ್ನೂ ಓದಿ: ಇಬ್ಬರು ಅಸಹಾಯಕರು ಮೈತ್ರಿ ಮಾಡಿಕೊಳ್ತಿದ್ದಾರೆ: ಮಾಜಿ ಸಿಎಂ ಶೆಟ್ಟರ್ ವ್ಯಂಗ್ಯ​!

ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಗ್ಯಾರಂಟಿಗಳನ್ನು ಜಾರಿ‌ಗೊಳಿಸಲು ಆಗುವುದಿಲ್ಲ, ಸುಮ್ಮನೆ ಆಶ್ವಾಸನೆ ‌ಕೊಟ್ಟಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ, ನಾವು ಎಲ್ಲಾ ಗ್ಯಾರಂಟಿಗಳ ಅನುಷ್ಠಾನವನ್ನು ಕೇವಲ ನೂರು ದಿನಗಳಲ್ಲಿ ‌ಮಾಡಿದ್ದೇವೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES