Sunday, December 22, 2024

ಸನಾತನ ಧರ್ಮ ಏಡ್ಸ್, ಕುಷ್ಠರೋಗ ಇದ್ದಂತೆ : ಡಿಎಂಕೆ ಸಂಸದ ಎ. ರಾಜಾ

ಬೆಂಗಳೂರು : ಸನಾತನ ಧರ್ಮ ಡೆಂಘೀ, ಮಲೇರಿಯಾವಲ್ಲ. ಏಡ್ಸ್ (HIV) ರೋಗಿವಿದ್ದಂತೆ ಎಂದು ಡಿಎಂಕೆ ಸಂಸದ ಎ. ರಾಜಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅವರು, ಸನಾತನ ಮತ್ತು ವಿಶ್ವಕರ್ಮ ಯೋಜನೆ ಒಂದೇ. ಪ್ರಧಾನಿ ನರೇಂದ್ರ ಮೋದಿ ಅವರು ಸನಾತನ ಧರ್ಮಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ ಎಂದು ಹೇಳಿದ್ದಾರೆ.

ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ತುಂಬಾ ಮೃದುವಾಗಿ ಮಾತನಾಡಿದ್ದಾರೆ. ಸನಾತನ ಧರ್ಮವನ್ನು ಮಲೇರಿಯಾ, ಡೆಂಘಿಗೆ ಹೋಲಿಸಿದ್ದಾರೆ. ಮಲೇರಿಯಾಗೂ, ಡೆಂಘೀ ನಂತ ರೋಗಗಳು ಸಾಮಾಜಿಕ ಪಿಡುಗು ಅಲ್ಲ. ಅದನ್ನು ಜನರು ಭಯದಿಂದ  ನೋಡುವುದಿಲ್ಲ ಎಂದು ತಿಳಿಸಿದ್ದಾರೆ.

ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕುಷ್ಠರೋಗ, ಎಚ್ಐವಿಯನ್ನು ಅಸಹ್ಯಕರವಾಗಿ ನೋಡಲಾಯಿತು. ಆದ್ದರಿಂದ ನಾವು ಇದನ್ನು ಎಚ್‌ಐವಿ ಮತ್ತು ಕುಷ್ಠರೋಗದಂತಹ ಸಾಮಾಜಿಕ ಅವಸ್ಥೆಯಿಂದ ಕೂಡಿದ ಕಾಯಿಲೆಯಾಗಿ ನೋಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಇದಾವುದು ಹೊಸ ಧರ್ಮ? ಸನಾತನ? : ನಟ ಕಿಶೋರ್

ನಾನು ಚರ್ಚೆಗೆ ಸಿದ್ಧನಿದ್ದೇನೆ

ಪ್ರಧಾನಿ ಮೋದಿ ಸನಾತನ ಧರ್ಮಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಆದರೆ, ಹಿಂದೂಗಳು ಸಮುದ್ರವನ್ನು ದಾಟುವುದಿಲ್ಲ ಅಂತ ಅವರು ಅದನ್ನು ಮಾಡುತ್ತಿಲ್ಲ. ಯಾರನ್ನಾದರೂ ತನ್ನಿ, ನಾನು ಸನಾತನ ಧರ್ಮದ ಬಗ್ಗೆ ಚರ್ಚೆಗೆ ಸಿದ್ಧನಿದ್ದೇನೆ. ಅವರು ಯಾವುದೇ ರೀತಿಯ ಆಯುಧಗಳನ್ನು ಹೊಂದಲಿ, ನಾನು ದೆಹಲಿಯಲ್ಲಿ ಪೆರಿಯಾರ್ ಮತ್ತು ಅಂಬೇಡ್ಕರ್ ಪುಸ್ತಕಗಳೊಂದಿಗೆ ಚರ್ಚೆಗೆ ಬರುತ್ತೇನೆ ಎಂದು ಸವಾಲೆಸೆದಿದ್ದಾರೆ.

RELATED ARTICLES

Related Articles

TRENDING ARTICLES