ಬೆಂಗಳೂರು : ಜಾತಕದಲ್ಲಿ ದುಷ್ಟಬಾಧೆಗಳಿಂದ ಬಳಲುತ್ತಿರುವವರು ವಿಶೇಷವಾಗಿ ಶ್ರೀ ಕಾಳಿಮಾತೆಯ ಆರಾಧನೆಯನ್ನು ಮಾಡಬೇಕು ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಶ್ರೀ ಕಾಳಿಮಾತೆ ಆರಾಧನೆಯಂದಾಗುವ ಪ್ರಯೋಜನಗಳ ಕುರಿತು ಪವರ್ ಟಿವಿಗೆ ಶ್ರೀಗಳು ಮಾಹಿತಿ ನೀಡಿದ್ದಾರೆ.
ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಕಾಳಿ ದೇವಿಯು ಪ್ರಮುಖಳು. ಕಾಳಿ ದೇವಿಯು ಪಾರ್ವತಿಯ ಸ್ವರೂಪಳಾಗಿದ್ದಾಳೆ. ಕಾಳಿಯನ್ನು ಶಕ್ತಿದೇವತೆಯೆಂದು ಕರೆಯಲಾಗುತ್ತದೆ. ದುಷ್ಟ ಶಕ್ತಿಗಳನ್ನು ನಾಶಗೊಳಿಸಲು ಪಾರ್ವತಿಯು ಕಾಳಿ ದೇವಿಯ ಅವತಾರ ಧರಿಸಿದಳು ಎಂದು ಹೇಳಿದ್ದಾರೆ.
ಶ್ರೀ ಕಾಳೆಮಾತೆಯ ಆರಾಧನೆ ಹೇಗೆ?
ಇದನ್ನೂ ಓದಿ : ವರಮಹಾಲಕ್ಷ್ಮಿ ವ್ರತ 2023 : ಲಕ್ಷ್ಮೀ ಪೂಜೆಯ ಶುಭ ಮುಹೂರ್ತಗಳಾವುವು? ವ್ರತ ಆಚರಣೆಯ ಮಹತ್ವವೇನು?
ನಾಳೆ ಶ್ರೀಗಳ ನೇತೃತ್ವದಲ್ಲಿ ಮಹಾಕಾಳಿ ಯಾಗ
ಸಿದ್ಧಲಿಂಗೇಶ್ವರ ಗದ್ದುಗೆ ಮಠದದಲ್ಲಿ ಸೆಪ್ಟಂಬರ್ 7ರಂದು ಕಾಳಿಯ ಪ್ರಸನ್ನತೆಗಾಗಿ ಮಹಾಕಾಳಿ ಯಾಗವನ್ನು ಹಮ್ಮಿಕೊಳ್ಳಲಾಗಿದೆ. ಸೇವೆಯನ್ನು ಮಾಡಲು ಇಚ್ಛಿಸುವವರು ಮೊ.ಸಂ. 6364167671 ಹಾಗೂ ಇದೇ ನಂಬರ್ಗೆ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ತಮ್ಮ ಕಾಣಿಕೆಯನ್ನು ಸಮರ್ಪಿಸಬಹುದು ಎಂದು ಭಕ್ತರಿಗೆ ಶ್ರೀಗಳು ತಿಳಿಸಿದ್ದಾರೆ.
ಮಹಾಕಾಳಿ ಮಂತ್ರ
‘ಓಂ ಕ್ಲೀಂ ಕ್ಲೀಂ ಮಹಾಕಾಳಿ ಪ್ರಸನ್ನಕಾಳಿ ಶತ್ರುಸಂಹಾರಿಣಿ ಕಾಳಿ
ದಕ್ಷಿಣಾಕಾಳಿ ಮಮ ಅನುಗ್ರಹಂ ದೇಹಿಮೇ ದೇಹಿಮೇ ನಮೋ ನಮಃ’
ಶುದ್ಧ ಚಿತ್ತದಿಂದ ಭಕ್ತಿಯಿಂದ ಪಠಣೆಯನ್ನು ಮಾಡಿ ಶ್ರೀ ಕಾಳಿಮಾತೆಯ ಅನುಗ್ರಹಕ್ಕೆ ಪತ್ರರಾಗಿ ಎಂದು ಶ್ರೀಗಳು ಮಾಹಿತಿ ನೀಡಿದ್ದಾರೆ.