Monday, December 23, 2024

ಉದ್ಯೋಗ ಕೊಡಿಸುವುದಾಗಿ ವಂಚನೆ ; ಯುವಕರು ಕಂಗಾಲು

ವಿಜಯಪುರ : ವಿದೇಶವೊಂದರಲ್ಲಿ ಫ್ಯಾಕ್ಟರಿ ಉದ್ಯೋಗ ಎಂದು ಇಬ್ಬರು ಯುವಕರನ್ನು ಕರೆಸಿ ಒಂಟೆ ಕಾಯಲು ಬಿಟ್ಟ ಕಿರಾತಕರು ಘಟನೆ ಬಬಲೇಶ್ವರ ತಾಲೂಕಿನ ಅಡವಿಸಂಗಾಪುರ ಗ್ರಾಮದಲ್ಲಿ ನಡೆದಿದೆ.

ವಿದೇಶಗಳಿಗೆ ಹೋಗಬೇಕೆಂಬುವ ಆಸೆಯಿಂದ ಗುಮ್ಮಟನಗರಿಯ ವಿಶಾಲ ಹಾಗೂ ಸಚಿನ್ ಎಂಬ ಇಬ್ಬರು ಯುವಕರು ಕಳೆದ 6 ತಿಂಗಳ ಹಿಂದೆ ಉದ್ಯೋಗವಿದೆ ಎಂದು ಮುಂಬೈ ಮೂಲದ ಓರ್ವ ಏಜೆಂಟ್ ಹಣ್ಣು-ತರಕಾರಿ ಪ್ಯಾಕಿಂಗ್ ಕೆಲಸ ಎಂದು ಇಬ್ಬರಿಂದ ತಲಾ ಒಂದು ಲಕ್ಷ ರೂಪಾಯಿ ವಸೂಲಿ ಮಾಡಿ ಕುವೈತ್ ದೇಶಕ್ಕೆ ಕಳುಹಿಸಿಕೊಟ್ಟಿದ್ದನು. ಅಷ್ಟೇ ಅಲ್ಲ ಭಾರತೀಯ ರೂಪಾಯಿಯಲ್ಲಿ 37 ಸಾವಿರ ಸಂಬಳ, ಊಟ ವಸತಿ ಸಹ ಪ್ರೀ ನೀಡುವುದಾಗಿ ಹೇಳಿದ್ದ ಏಜೆಂಟ್.

ಇದನ್ನು ಓದಿ : ಮತಾಂತರ ಆದವ್ರು ಐದು ಬಾರಿ ನಮಾಜ್ ಮಾಡ್ಬೇಕು : ಸಿ.ಟಿ. ರವಿ

ಬಳಿಕ ಕುವೈತ್ ದೇಶಕ್ಕೆ ಹೋಗುತ್ತಿದ್ದಂತೆ ಪ್ರೂಟ್ ಪ್ಯಾಕಿಂಗ್ ಕೆಲಸದ ಬದಲಾಗಿ ಒಂಟೆ ಮೇಯಿಸುವ ಕೆಲಸಕ್ಕೆ ನೇಮಕ ಮಾಡಿದರು. ಇದನ್ನು ಕಂಡು ಇಬ್ಬರಿಗೂ ಶಾಕ್ ಆಗಿತ್ತು. ಆದರೂ ಸಹ ಇರಲಿ ಎಂದು ಅದೇ ಕೆಲಸಕ್ಕೆ ಒಪ್ಪಿಕೊಂಡಿದ್ದರು. ಬಳಿಕ ಕೆಲಸಕ್ಕೆ ಸೇರಿಸಿಕೊಂಡವರು ಕೆಲಸ ಮಾಡಿಸಿಕೊಂಡು ಸಂಬಳ ಮಾತ್ರ ಸರಿಯಾಗಿ ನೀಡುತ್ತಿರಲಿಲ್ಲ.

ವಿಶಾಲ ಮತ್ತು ಸಚಿನ್ ನಾವು ಕೆಲಸ ಮಾಡಿದ್ದಕ್ಕೆ ಸಂಬಳ ಕೊಡಿ ಎಂದು ಪ್ರಶ್ನೆ ಮಾಡಿದರೆ ಅವರ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕುತ್ತಿದ್ದರಂತೆ. ಇದರಿಂದ ಆತಂಕಕ್ಕೆ ಒಳಗಾಗಿ ಏನು ಮಾಡುವುದು ಎಂದು ಗೊತ್ತಾಗದೆ ಕೊನೆಗೆ ತಮ್ಮೂರಿನ ಗ್ರಾಮದ ಮುಖಂಡರ ಮೂಲಕ ಸಂಸದವರನ್ನು ಸಂಪರ್ಕಿಸಿದ ಯುವಕರು. ಬಳಿಕ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಭಾರತ ಸರ್ಕಾರದ ಮೂಲಕ ಅಲ್ಲಿನ ವಿದೇಶಾಂಗ ಇಲಾಖೆ ಸಹಾಯ ಪಡೆದು ಕೊನೆಗೆ ಕಿರಾತಕರಿಂದ ಬಚಾವ್‌ ಆಗಿ ವಾಪಾಸ್‌ ತಾಯ್ನಾಡಿಗೆ ಬಂದು ಇಬ್ಬರು ನಿಟ್ಟುಸಿರು ಬಿಟ್ಟಿದ್ದಾರೆ.

ಸದ್ಯ ಸುರಕ್ಷಿತವಾಗಿ ವಾಪಸ್ ಆಗಿರೋದು ಯುವಕರ ಕುಟುಂಬಸ್ಥರಲ್ಲಿ ಸಂತಸವನ್ನು ಮೂಡಿಸಿದೆ. ಆದ್ರೆ ಮಕ್ಕಳ ಸಂಕಷ್ಟ ನೆನೆದು ಸಚಿನ್ ತಂದೆ ಸಿದ್ದಪ್ಪ ಮಾಧ್ಯಮಗಳ ಎದುರು ಕಣ್ಣೀರು ಹಾಕಿದ್ದಾರೆ.

RELATED ARTICLES

Related Articles

TRENDING ARTICLES