ಚಿಕ್ಕಮಂಗಳೂರು : ಬಸ್ಸಿಗಾಗಿ ಕಾಯತ್ತಾ ನಿಂತಿದ್ದ ವೇಳೆ ಶಾಲಾ ಮಕ್ಕಳ ಮೇಲೆ ಖಾಸಗಿ ಬಸವೊಂದು ಹರಿದು ಹೋಗಿರುವ ಘಟನೆ ತರೀಕೆರೆ ತಾಲೂಕಿನ ಕಾವಲ್ ದುಗ್ಲಾಪುರ ಗೇಟ್ ಬಳಿ ನಡೆದಿದೆ.
ಬಸ್ಗಾಗಿ ಶಾಲಾ ಮಕ್ಕಳು ಕಾಯುತ್ತ ನಿಂತಿದ್ದ ವೇಳೆ ಖಾಸಗಿ ಬಸ್ ಚಾಲಕನೊಬ್ಬ ಒವರ್ ಸ್ಪೀಡ್ನಿಂದ ಕಂಟ್ರೋಲ್ ತಪ್ಪಿದ್ದ ಹಿನ್ನೆಲೆ ಏಕಾಏಕಿ ರಸ್ತೆ ಬದಿಯ ಬಸ್ ನಿಲ್ದಾಣದ ಬಳಿ ನಿಂತಿದ್ದ ಶಾಲಾ ಮಕ್ಕಳ ಮೇಲೆ ಹರಿದಿದೆ. ಈ ಪರಿಣಾಮ ತುಳಸಿ (15) ಹಾಗೂ ನಿವೇದಿತ (14) ಎಂಬ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ.
ಇದನ್ನು ಓದಿ : ಉದ್ಯೋಗ ಕೊಡಿಸುವುದಾಗಿ ವಂಚನೆ ; ಯುವಕರು ಕಂಗಾಲು
ಅದೃಷ್ಟವಶಾತ್ ಐವರು ಮಕ್ಕಳು ಕೂದಲೆಳೆ ಅಂತಾರದಲ್ಲಿ ಪಾರಾಗಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಮಕ್ಕಳಿಗ ಅಲ್ಲದೆ ಪಕ್ಕದಲ್ಲಿದ್ದ ಮನೆಗೆ ನುಗ್ಗಿದ ಪರಿಣಾಮ ಮುಂಭಾಗದ ಮೇಲ್ಚಾವಣಿ ಸಂಪೂರ್ಣ ಜಖಂ ಆಗಿದೆ. ಘಟನೆ ಬಳಿಕ ಮಕ್ಕಳ ತುರ್ತು ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾಮ್ ಆಸ್ಪತ್ರೆಗೆ ರವಾನೆ ಮಾಡಲಾಯಿತು.
ಘಟನಾ ಸಂಬಂಧ ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಯಂತ್ರಣ ತಪ್ಪಿದ ಬಸ್ ಕಂಡು ರಸ್ತೆ ಬದಿ ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿದ್ದು, ಅಧಿಕ ವೇಗದ ಖಾಸಗಿ ಬಸ್ ಗಳ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.