Sunday, December 22, 2024

ಹೋಂ ಗಾರ್ಡ್​ನನ್ನು ಹಿಡಿದು ಥಳಿಸಿದ ವ್ಯಕ್ತಿ!

ಮೈಸೂರು : ಕರ್ತವ್ಯನಿರತ ಹೋಂಗಾರ್ಡ್‌ ಮೇಲೆಯೇ ಹಲ್ಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರಿನ KSRTC ಬಸ್ ನಿಲ್ದಾಣದಲ್ಲಿ ನಡೆದಿದೆ.

ಹುಣಸೂರಿನ ಅರವಿಂದ್‌ ಬಂಧಿತ ಆರೋಪಿ, ಹುಣಸೂರಿನ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ನೋ ಪಾರ್ಕಿಂಗ್‌ ಜಾಗದಲ್ಲಿ ಬೈಕ್ ನಿಲ್ಲಿಸಿದ್ದ ಅರವಿಂದ್ ನ್ನು ಪ್ರಶ್ನೆ ಮಾಡಿದ್ದಕ್ಕೆ ಸಿಟ್ಟಿಗೆದ್ದು ಹೋಂಗಾರ್ಡ್​ ವಿರುದ್ದ ತೀವ್ರ ವಾಗ್ವಾದ ನಡೆಸಿದ್ದಾನೆ, ಈ ವೇಳೆ ಮಾತಿಗೆ ಮಾತು ಬೆಳೆದು ಹೋಂ ಗಾರ್ಡ್‌ ಷರ್ಟ್​ ನ ಕೊರಳಿನ ಪಟ್ಟಿಗೆ ಕೈಹಾಕಿ ಥಳಿಸಿದ್ದಾನೆ.

ಇದನ್ನೂ ಓದಿ: ನಟ ವಿಜಯ್​ ದೇವರಕೊಂಡರಿಂದ ಬಡ ಕುಟುಂಬಗಳಿಗೆ 1ಕೋಟಿ ರೂ. ದಾನ!

ಹೋಂಗಾರ್ಡ್​ ಮೇಲೆ ಹಲ್ಲೆನಡೆಸಿದ್ದನ್ನು ಕಂಡ ಸ್ಥಳೀಯರು ಆರೋಪಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES