Thursday, November 21, 2024

ಚಂದ್ರಯಾನ 3: 3D ಫೋಟೊ ಕಳಿಸಿದ ಪ್ರಗ್ಯಾನ್​ ರೋವರ್​

ಬೆಂಗಳೂರು : ಚಂದ್ರನ ದಕ್ಷಿಣ ಧ್ರುವದಲ್ಲಿ ವಿರಾಜಮಾನವಾಗಿರುವ ವಿಕ್ರಮ್‌ ಲ್ಯಾಂಡರ್‌ನ 3ಡಿ ಫೋಟೋವನ್ನು ಇಸ್ರೋ ಬಿಡುಗಡೆಗೊಳಿಸಿದೆ. ಪ್ರಗ್ಯಾನ್ ರೋವರ್, ವಿಕ್ರಮ್ ಲ್ಯಾಂಡರ್‌ನ ಫೋಟೋ ಒಂದನ್ನು ಸೆರೆ ಹಿಡಿದು ಕಳುಹಿಸಿತ್ತು.

ಇದನ್ನೂ ಓದಿ: ಹೋಂ ಗಾರ್ಡ್​ನನ್ನು ಹಿಡಿದು ಥಳಿಸಿದ ವ್ಯಕ್ತಿ!

ಆ ಚಿತ್ರವನ್ನು ಇಸ್ರೋ ಅವಾಗ್ಲಿಫ್ ತಂತ್ರಜ್ಞಾನದ ಮೂಲಕ ನಾವ್‌ಕ್ಯಾಂ ಸ್ಟಿರಿಯೋ ಚಿತ್ರಗಳನ್ನು ಬಳಸಿ 3ಡಿಗೆ ಪರಿವರ್ತಿಸಿದೆ. ಇದರಿಂದ ಲ್ಯಾಂಡರ್ ಅನ್ನು ತ್ರಿ ಡೈಮನ್ಷನ್‌ಲ್ಲಿ ವೀಕ್ಷಿಸಬಹುದು. ಬ್ಲೂ ಅಂಡ್ ಗ್ರೀನ್ ಲೆನ್ಸ್‌ನಿಂದ ವೀಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಆ ರೀತಿಯಲ್ಲಿ ನೋಡಿದರೆ ಮಾತ್ರ, ಈ ಚಿತ್ರಗಳ ಹಾಗೂ 38 ವಿನ್ಯಾಸವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಸೂರ್ಯನ ಅಧ್ಯಯನ ನಡೆಸಲು ಉಡಾಯಿಸಲಾಗಿರುವ ಆದಿತ್ಯ-ಎಲ್1ರ 2ನೇ ಹಂತದ ಕಕ್ಷೆ ಮೇಲ್ದರ್ಜೆಗೆ ಏರಿಸುವಿಕೆಯನ್ನು ಯಶಸ್ವಿಯಾಗಿ ಮಂಗಳವಾರ ನಡೆಸಲಾಗಿದೆ. ಸೆ.10ರಂದು ಮೂರನೇ ಹಂತದ ಕಕ್ಷೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆ ನಡೆಯಲಿದೆ.

RELATED ARTICLES

Related Articles

TRENDING ARTICLES