Wednesday, January 22, 2025

ಮತಾಂತರ ಆದವ್ರು ಐದು ಬಾರಿ ನಮಾಜ್ ಮಾಡ್ಬೇಕು : ಸಿ.ಟಿ. ರವಿ

ಹಾಸನ : ಜಗದೀಶ್ ಶೆಟ್ಟರ್ ನಮ್ಮ ಪಕ್ಷದ ಅಧ್ಯಕ್ಷರಾಗಿದ್ರು. ಈಗ ಕಾಂಗ್ರೆಸ್​ಗೆ ಹೋಗಿದ್ದಾರೆ. ಹೊಸದಾಗಿ ಮತಾಂತರ ಆದವರು ಐದು ಸಾರಿ ನಮಾಜ್ ಮಾಡ್ತಾರೆ. ಅಲ್ಲೇ ಇರುವವರು ಒಂದು ಬಾರಿ ನಮಾಜ್ ಮಾಡ್ತಾರೆ ಎಂದು ಮಾಜಿ ಸಚಿವ ಸಿ.ಟಿ. ರವಿ ಕುಟುಕಿದರು.

ಲೋಕಸಭಾ ಚುನಾವಣೆಯಲ್ಲಿ 15 ರಿಂದ 20 ಸ್ಥಾನ ಗೆಲ್ಲುತ್ತೇವೆ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ಹಾಸನದಲ್ಲಿ ಪ್ರತಿಕ್ರಿಯಿಸಿದ ಅವರು, ಇಡೀ ದೇಶದಲ್ಲಿ 20 ಸ್ಥಾನ ಗೆಲ್ಲುತ್ತೇವೆ ಎಂದಿರಬಹುದು ಎಂದು ಲೇವಡಿ ಮಾಡಿದರು.

I.N.D.I.A ಹೆಸರು ಕೇಳಿ ಬಿಜೆಪಿಗೆ ನಡುಕ ಶುರುವಾಗಿದೆ ಎಂಬ ಡಿಕೆಶಿ ಹೇಳಿಕೆಗೆ, ಡಿ.ಕೆ.ಶಿವಕುಮಾರ್‌ ಅವರಾ ದೇಶಕ್ಕೆ ಇಂಡಿಯಾ ಅಂತ ಹೆಸರಿಟ್ಟಿದ್ದು? ನಾನು ಬ್ರೀಟಿಷರು ಇಂಡಿಯಾ ಅಂತ ಹೆಸರು ಇಟ್ಟಿದ್ದರು ಅನ್ಕೊಂಡಿದ್ದೆ. ಇವರು ಯಾರನ್ನು ಬೇಕಾದರೂ ಹೆದುರಿಸಬೇಕು ಅನ್ಕೊಂಡಿದ್ದಾರಾ? ಉತ್ತರ ಕುಮಾರನು ಹಂಗೆ ಕೊಚ್ಕೊತ್ತಿದ್ದನಂತೆ. ಸೈನ್ಯ ನೋಡುತ್ತಿದ್ದಂಗೆ ಗಡಗಡ ನಡುಗುತ್ತಿದ್ದ. ಹಾಗೆಯೇ ಡಿ.ಕೆ. ಶಿವಕುಮಾರ್ ಹೇಳುತ್ತಿದ್ದಾರೆ ಎಂದು ತಿರುಗೇಟು ಕೊಟ್ಟರು.

ತಲೆ ಹೋದರು ಪರವಾಗಿಲ್ಲ

ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ನೀರು ಬಿಡಲ್ಲ ಅಂತ ಹೇಳಬೇಕಿತ್ತು. ಅವರ ದಾಟಿಯಲ್ಲಿ ನೀರು ಬಿಡಲ್ಲ ಎನ್ನಬೇಕಿತ್ತು. ಆದರೆ, ತಲೆ ಹೋದರು ಪರವಾಗಿಲ್ಲ ನೀರು ಕೊಟ್ಟೆ ಕೊಡ್ತಿನಿ ಅಂತಿದ್ದಾರೆ. ನಮ್ಮ ರಾಜ್ಯದ ರೈತರ ಕಡೆಗೂ ಕಣ್ಣೆತ್ತಿ ನೋಡುತ್ತಿಲ್ಲ ಎಂದು ಸಿ.ಟಿ ರವಿ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES