Monday, December 23, 2024

ವೇದಿಕೆ ಮೇಲೆ ಕಾಲು ಜಾರಿ ಬಿದ್ದ ಬಿಹಾರ್​​ ಸಿಎಂ

ಪಾಟ್ನಾ: ಇಲ್ಲಿನ ವಿಶ್ವವಿದ್ಯಾನಿಲಯದ ವೇದಿಕೆ ಮೇಲೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್  ಹಠಾತ್ ಜಾರಿ ಬಿದ್ದಿದ್ದು, ಈ ವೇಳೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ವೇದಿಕೆಯಲ್ಲಿದ್ದರು.

ನೂತನ ಸೆನೆಟ್ ಸಭಾಂಗಣ ಉದ್ಘಾಟನೆ ಹಾಗೂ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಲು ಶಿಕ್ಷಕರ ದಿನಾಚರಣೆ ನಿಮಿತ್ತ ರಾಜ್ಯಪಾಲರೊಂದಿಗೆ ಸಿಎಂ ನಿತೀಶ್ ಪಿಯುಗೆ ಬಂದಿದ್ದರು. ಕೆಳಗೆ ಬಿದ್ದ ತಕ್ಷಣ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮುಖ್ಯಮಂತ್ರಿಯನ್ನು ಹತೋಟಿಗೆ ತಂದರು. ಅವರಿಗೆ ಯಾವುದೇ ರೀತಿಯ ಗಾಯವಾಗಿಲ್ಲ, ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇದರ ವಿಡಿಯೋ ಕೂಡ ವೈರಲ್ ಆಗಿದೆ.

ಇದನ್ನೂ ಓದಿ: ಚಂದ್ರಯಾನ 3: 3D ಫೋಟೊ ಕಳಿಸಿದ ಪ್ರಗ್ಯಾನ್​ ರೋವರ್​

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಂಗಳವಾರ ಬೆಳಗ್ಗೆ ಪಾಟ್ನಾ ವಿಶ್ವವಿದ್ಯಾಲಯಕ್ಕೆ ಆಗಮಿಸಿದರು. ಶಿಕ್ಷಕರ ದಿನಾಚರಣೆ ನಿಮಿತ್ತ ಇಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಉಪಸ್ಥಿತರಿದ್ದರು. ಉದ್ಘಾಟನೆಗೆ ರಾಜ್ಯಪಾಲರೊಂದಿಗೆ ಸಿಎಂ ನಿತೀಶ್ ವೇದಿಕೆ ತಲುಪುತ್ತಿದ್ದಂತೆಯೇ ಅವರ ಕಾಲು ಜಾರಿತು. ಮರು ಕ್ಷಣವೇ ಮುಖ್ಯಮಂತ್ರಿ ತತ್ತರಿಸಿ ವೇದಿಕೆ ಮೇಲೆ ಬಿದ್ದರು.

ಇದನ್ನು ನೋಡಿ ಅಲ್ಲಿದ್ದವರೆಲ್ಲ ಸ್ತಬ್ಧರಾದರು. ಆದರೆ, ಭದ್ರತಾ ಸಿಬ್ಬಂದಿ ತಕ್ಷಣವೇ ಸಿಎಂ ನಿತೀಶ್ ಅವರನ್ನು ನಿಭಾಯಿಸಿ ನಿಲ್ಲುವಂತೆ ಮಾಡಿದರು. ಸಿಎಂಗೆ ಯಾವುದೇ ರೀತಿಯ ಗಾಯವಾಗದಿರುವುದನ್ನು ಕಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

RELATED ARTICLES

Related Articles

TRENDING ARTICLES